ಬೆಂಗಳೂರು: ಚಿತ್ರಮಂದಿರಕ್ಕೆ ಪ್ರೇಕ್ಷಕರು ಬರುತ್ತಿಲ್ಲ ಎಂಬ ವದಂತಿಗೆ ‘ಭೀಮ’ ಸಿನಿಮಾ ಬ್ರೇಕ್ ಹಾಕಿದೆ. ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಆ.09ರಂದು ಬಿಡುಗಡೆಯಾದ ‘ಭೀಮ’ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡುತ್ತಿದೆ. ಈ ಮೂಲಕ ಸ್ಯಾಂಡಲ್‌ವುಡ್ ಮತ್ತೆ ಬಾಕ್ಸಾಫೀಸ್‌ನಲ್ಲಿ ಗೆಲುವಿನ ನಗೆ ಬೀರಿದಂತೆ ಆಗಿದೆ.
‘ಭೀಮ’ ಸಿನಿಮಾದ ಯಶಸ್ಸಿಗೆ ಕಾರಣವಾದ ನಿರ್ದೇಶನ ತಂಡವನ್ನು ಸಿನಿಮಾ ಸಕ್ಸಸ್ ಮೀಟ್ ನಲ್ಲಿ ನಟ ದುನಿಯಾ ವಿಜಯ್ ಹೊಗಳಿದ್ದಾರೆ. ನಿರ್ದೇಶನ ತಂಡದ ಜನರ್ದನ್ ಮೌರ್ಯರ ಬಗ್ಗೆ ಮಾತನಾಡಿ ‘ಮೌರ್ಯ ತುಂಬಾ ವಿಚಾರವಂತ, ಗುಣವಂತ. ಜೊತೆಗೆ ವಿಚಾರಗಳನ್ನು ನೇರವಾಗಿ ಹೇಳಿ ಬಿಡುತ್ತಾನೆ. ಸಂಪೂರ್ಣ ಭೀಮಾ ಸಿನಿಮಾದ ಜೊತೆಗೆ ನಿಂತು, ಕೆಲ್ಸ ಮಾಡಿ ಇವತ್ತು ಸಿನಿಮಾ ಯಶಸ್ಸಿ ಕಾರಣರಾಗಿದ್ದಾರೆ. ಮೌರ್ಯ ನಿಮಗೂ ಥ್ಯಾಂಕ್ಸ್’ ಎಂದಿದ್ದಾರೆ.
ಜನರ್ದನ್ ಮೌರ್ಯ ಮೂಲತಃ ಮೈಸೂರಿನವರಾಗಿದ್ದು ಅವರ ನಿರ್ದೇಶನದಲ್ಲಿ ಈ ಮೊದಲು ‘ಪರತ್ಲ’ ‘ಮಾತಾಡಿ’ ‘ದಿ ಬ್ಲೌಸ್’ ಈ ಮೂರು ಕಿರುಚಿತ್ರಗಳು ಮೂಡಿಬಂದಿದೆ. ಜೊತೆಗೆ ಕಿರುಚಿತ್ರ ಫೆಸ್ಟಿವಲ್ ನಲ್ಲಿ ‘ಬೆಸ್ಟ್ ಡೈರೆಕ್ಟರ್’ ಪ್ರಶಸ್ತಿಯನ್ನು ಇವರು ಮುಡಿಗೇರಿಸಿಕೊಂಡಿದ್ದಾರೆ. ಅಲ್ಲದೆ ಬೆಂಗಳೂರು ಅಂತರಾಷ್ಟ್ರೀಯ ಕಿರುಚಿತ್ಸೋವದಲ್ಲಿ ಧ್ವನಿಸಿದ ‘ಬಾಯಿಲ್ಡ್ ರೈಸ್’ ತುಳು ಕಿರುಚಿತ್ರದ ಛಾಯಾಗ್ರಾಹಕರಾಗಿದ್ದರು. ಬಳಿಕ ‘ಭೀಮ’ ಈ ಮೊದಲುಸಿನಿಮಾದ ನಿರ್ದೇಶನದ ತಂಡದಲ್ಲಿ ಗುರುತಿಸಿಕೊಂಡಿದ್ದಾರೆ.
ಇಡೀ ಸಿನಿಮಾ ಯಶಸ್ಸಿಗೆ ನಿರ್ಮಾಪಕರು ಎಷ್ಟು ಕಾರಣವೂ ಅಷ್ಟೇ ನಿರ್ದೇಶನ ತಂಡ ಕೂಡ ಕಾರಣವಾಗಿದೆ ಎಂದಿರುವ ನಟ ದುನಿಯಾ ವಿಜಯ್ ‘ಭೀಮ’ ಸಿನಿಮಾಗೆ ನಿರ್ದೇಶನದ ತಂಡವೇ ದೊಡ್ಡ ಶಕ್ತಿ ಎಂದಿದ್ದಾರೆ.