ಚಾರ್ಮಾಡಿ ಘಾಟ್‌ನಲ್ಲಿ ಗುಡ್ಡ ಕುಸಿತ: ಕೊಟ್ಟಿಗೆಹಾರದಿಂದಲೇ ವಾಹನಗಳು ವಾಪಸ್​:ರಸ್ತೆ ಮೇಲೆ ಬಿದ್ದ ಮಣ್ಣು, ಕಲ್ಲುಬಂಡೆ, ಮರದ ಕೊಂಬೆ

ಚಾರ್ಮಾಡಿ : ಚಾರ್ಮಾಡಿ ಘಾಟ್‌ನಲ್ಲಿ ಗುಡ್ಡ ಕುಸಿತದಿಂದ ಸಂಚಾರ ಸ್ಥಗಿತಗೊಂಡಿದೆ.

ಘಾಟ್​ ರಸ್ತೆಯ 10ನೇ ತಿರುವಿನಲ್ಲಿ ಜು.27ರ ರಾತ್ರಿ ಗುಡ್ಡ ಕುಸಿದಿದ್ದು, ರಸ್ತೆ ಮೇಲೆ ಮಣ್ಣು, ಕಲ್ಲುಬಂಡೆ, ಮರದ ಕೊಂಬೆಗಳು‌ ಬಿದ್ದು ಸಂಚಾರ ಬಂದ್ ಆಗಿದೆ.

ಕಳೆದ ರಾತ್ರಿಯಿಂದ ಗಾಳಿಸಹಿತ ಧಾರಾಕಾರ ಮಳೆ ಸುರಿಯುತ್ತಿದ್ದು ಅತ್ತ ಶಿರಾಡಿ ಘಾಟ್ ನಲ್ಲೂ ಗುಡ್ಡ ಕುಸಿಯುತ್ತಿದ್ದು ಈಗ ಚಾರ್ಮಾಡಿ ಘಾಟ್ ನಲ್ಲೂ ಸಂಚಾರ‌ ನಿರ್ಬಂಧಿಸಲಾಗಿದೆ. ಈ ರಸ್ತೆಯಲ್ಲಿ ವಾಹನಗಳು ಸಂಚರಿಸದಂತೆ ಪೊಲೀಸರು ಎಚ್ಚರಿಕೆ ವಹಿಸಿದ್ದಾರೆ.

ನಿನ್ನೆ ರಾತ್ರಿ ಗುಡ್ಡ ಕುಸಿದ ಹಿನ್ನಲೆ ವಾಹನಗಳು ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿತ್ತು. ಬಳಿಕ ಸ್ಥಳೀಯರು ಹಾಗು ಪೊಲೀಸರು ಜೆಸಿಬಿ ಮೂಲಕ ವಾಹನಗಳು ಸಾಗುವಷ್ಟು ರಸ್ತೆಯನ್ನು ತೆರವುಗೊಳಿಸಿದರು. ನಂತರ ಒಂದೊಂದಾಗಿ ವಾಹನಗಳು ಸಂಚರಿಸಿದವು.

error: Content is protected !!