ಧಾರವಾಡ ಗ್ರಾಮಾಂತರ ಕ್ಷೇತ್ರದ ​ ಶಾಸಕರಿಂದ ಕೊರಗಜ್ಜ ದೈವಕ್ಕೆ ಹರಕೆ ಕೋಲ ಸೇವೆ: ದೈವದ ಮುಂದೆ ಸಂಕಷ್ಟ ಹೇಳಿಕೊಂಡ ಶಾಸಕ ವಿನಯ್​​ ಕುಲಕರ್ಣಿ’: ಅಧರ್ಮದಲ್ಲಿ ಹೋದವರನ್ನು ನಾನು ನೋಡಿಕೊಳ್ಳುತ್ತೇನೆ’: ದೈವ ನುಡಿ

ಮಂಗಳೂರು: ತುಳುನಾಡಿನಲ್ಲಿ ಕಾರ್ಣಿಕ ಮೆರೆಯುತ್ತಿರುವ ಕೊರಗಜ್ಜ ದೈವಕ್ಕೆ ಕರಾವಳಿ ಜಿಲ್ಲೆಯಲ್ಲಿ ಮಾತ್ರವಲ್ಲದೆ ಈಗ ರಾಜ್ಯಾದ್ಯಂತ ಭಕ್ತಾಧಿಗಳು ಹೆಚ್ಚಾಗಿದ್ದಾರೆ.‌

ಧಾರವಾಡ ಗ್ರಾಮಾಂತರ ಕ್ಷೇತ್ರದ ​ ಶಾಸಕ ವಿನಯ್​​ ಕುಲಕರ್ಣಿ ಅವರು ತೊಕ್ಕೊಟ್ಟು ಜಂಕ್ಷನ್​ನ ಕೊರಗಜ್ಜನ ಕಟ್ಟೆಯಲ್ಲಿ ಜು.27ರಂದು ರಾತ್ರಿ ಕುಟುಂಬಸಮೇತರಾಗಿ
ಕೊರಗಜ್ಜ ದೈವಕ್ಕೆ ಹರಕೆ ಕೋಲ ಸೇವೆ ಸಲ್ಲಿಸಿದರು.

ಕೋಲ ಸೇವೆಯ ಸಂದರ್ಭದಲ್ಲಿ ಇವರು ದೈವದ ಬಳಿ ತಮ್ಮ ಸಂಕಷ್ಟ ಹೇಳಿಕೊಂಡಿದ್ದಾರೆ. ಮಗನಿಗೆ ಅಪಘಾತ ಸಂಭವಿಸಿ ಆರೋಗ್ಯ ಸಮಸ್ಯೆ ಎದುರಾಗಿರುವ ಬಗ್ಗೆ, ಜೊತೆಗೆ 48 ದಿನಗಳೊಳಗೆ ಕ್ಷೇತ್ರ ನಿರ್ಬಂಧ ಸಮಸ್ಯೆ ಬಗೆಹರಿಸುವ ಬಗ್ಗೆ ದೈವ ಅಭಯ ನೀಡಿದ್ದು ಮುಂದಿನ ತಿಂಗಳು ಕ್ಷೇತ್ರ ಪ್ರವೇಶಕ್ಕಿರುವ ನಿರ್ಬಂಧದ ತೀರ್ಪಿನ ಬಗ್ಗೆ ಕುಲಕರ್ಣಿ ಪ್ರಸ್ತಾಪಿಸಿದರು.

ಸಂಕಷ್ಟ ನಿವಾರಿಸುವ ಬಗ್ಗೆ ಕೊರಗಜ್ಜ ದೈವ ಅಭಯ ನೀಡಿದ್ದು “ತಪ್ಪು ಮಾಡುವುದು ಸಹಜ. ಆದರೆ ಅದನ್ನು ತಿದ್ದಿಕೊಂಡು ಮುಂದುವರಿಯುವುದು ಉತ್ತಮ ಗುಣ, ಅಧರ್ಮದಲ್ಲಿ ಹೋದವರನ್ನು ನಾನು ನೋಡಿಕೊಳ್ಳುತ್ತೇನೆ. ಸಂಕಷ್ಟ ನಿವಾರಿಸಿ ಒಳಿತು ಮಾಡುತ್ತೇನೆ. ಮುಂದೆ ಸಂತೋಷದಿಂದ ಕ್ಷೇತ್ರಕ್ಕೆ ಬಂದು ಕೋಲ ಸೇವೆ ನೀಡುವಂತೆ ದೈವ ನುಡಿದಿದೆ.

error: Content is protected !!