ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ ಕಾಲೇಜ್ ನಲ್ಲಿ ಯೋಗ ದಿನಾಚರಣೆ

ವೇಣೂರು : ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ ಕಾಲೇಜು ನಿಟ್ಟಡೆಯಲ್ಲಿ ಜೂ.21ರಂದು ಯೋಗದಿನವನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಶಾಲಾ ಯೋಗ ತರಬೇತುದಾರರಾದ ಸತೀಶ್ ಆಚಾರ್ಯ ಇವರು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಮಾರ್ಗದರ್ಶನ ನೀಡಿ ಪ್ರಾಣಾಯಾಮ ಮತ್ತು ವಿವಿಧ ರೀತಿಯ ಆಸನಗಳನ್ನು ಮಾಡಿಸಿದರು.

ಮುಖ್ಯ ಅತಿಥಿಯಾಗಿ ಗೋವರ್ಧನ್ ಹೆಚ್. ಸಿಎಸ್‌ಸಿ ಗೌವರ್ನೆನ್ಸ್ ಇಂಡಿಯನ್ ಸರ್ವಿಸಸ್ ಲಿಮಿಟೆಡ್ ಉಪಸ್ಥಿತರಿದ್ದು, ಯೋಗ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ಜೊತೆಗೆ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ವಾಣಿ ಯೋಗಾಸನದಿಂದಾಗುವ ಉಪಯೋಗವನ್ನು ತಿಳಿಸಿದರು.

ಶಾಲಾ ಸಂಚಾಲಕರಾದ ಗಿರೀಶ್ ಕೆಎಚ್ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಅಶ್ವಿತ್ ಕುಲಾಲ್ ಇವರು ಯೋಗಾಸನದಲ್ಲಿ ಪಾಲ್ಗೊಂಡರು. ಕಾಲೇಜಿನ ಪ್ರಾಂಶುಪಾಲರಾದ ಓಮನ ಹಾಗೂ ಪವನ್ ಸೀನಿಯರ್ ಎಕ್ಸಿಕ್ಯೂಟಿವ್ ಎಸ್ ಬಿ ಐ ಜನರಲ್ ಇನ್ಸೂರೆನ್ಸ್ ಮಂಗಳೂರು ಮತ್ತು ಹರಿಣಾಕ್ಷಿ ಸಿ ಎ ಸ್ಸಿ ಸೆಂಟರ್ ನಾರಾವಿ ಉಪಸ್ಥಿತರಿದ್ದರು.

ಈ ಕಾರ್ಯಕ್ರಮವನ್ನು ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಶ್ರೀಮತಿ ಸುಜಾತ ನಿರೂಪಿಸಿ, ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಅಕ್ಷತ ಸ್ವಾಗತಿಸಿ, ಕಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಪವಿತ್ರ ಧನ್ಯವಾದ ಸಮರ್ಪಿಸಿದರು.

error: Content is protected !!