ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರದಿಂದ ಖಡಕ್ ರೂಲ್ಸ್: ಕಚೇರಿಗೆ ತಡವಾಗಿ ಬಂದ್ರೆ ಹಾಜರಾತಿಗೆ ಕತ್ತರಿ

ನವದೆಹಲಿ: ಸರ್ಕಾರಿ ಕಚೇರಿಗಳಿಗೆ ಕೆಲ ನೌಕರರು ಸರಿಯಾದ ಸಮಯಕ್ಕೆ ಬರೋದಿಲ್ಲ ಎಂಬುದು ಅನೇಕ ವರ್ಷಗಳ ಆರೋಪ. ಆದರೆ ಅಂತಹ ನೌಕರರಿಗೆ ಕೇಂದ್ರದಿAದ ಖಡಕ್ ರೂಲ್ಸ್ ಜಾರಿಯಾಗಿದೆ.

ಕೇಂದ್ರ ಸರ್ಕಾರಿ ನೌಕರರು ಕಚೇರಿಗೆ ಬೆಳಗ್ಗೆ 9.15ರೊಳಗೆ ಕಚೇರಿ ತಲುಪಿ, ಬಯೋಮೆಟ್ರಿಕ್ ನೀಡದಿದ್ದರೆ ಅಂತಹವರಿಗೆ ಅರ್ಧ ದಿನ ಸಾಮಾನ್ಯ ರಜೆ ಎಂದು ಪರಿಗಣಿಸಲು ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಆದೇಶ ನೀಡಿದೆ.

ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಹಾಜರಾತಿ ಪುಸ್ತಕದ ಬದಲಾಗಿ ಕಡ್ಡಾಯವಾಗಿ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಬಳಸಬೇಕು ಎಂದು ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ತಿಳಿಸಿದ್ದು, ಒಂದು ವೇಳೆ ವಿವಿಧ ಕಾರಣಗಳಿಂದ ನೌಕರರು ಕೆಲಸಕ್ಕೆ ಹಾಜರಾಗಲು ಸಾಧ್ಯವಾಗದಿದ್ದರೆ, ಒಂದು ದಿನ ಮೊದಲೇ ಕಚೇರಿಯಲ್ಲಿ ತಿಳಿಸಿ ಸಾಮಾನ್ಯ ರಜೆ ಚೀಟಿ ಸಲ್ಲಿಸಬೇಕು ಎಂದು ನೌಕರರಿಗೆ ಸೂಚಿಸಲಾಗಿದೆ.

ಉದ್ಯೋಗಿಗಳ ಹಾಜರಾತಿ, ಸಮಯ ಪಾಲನೆ ಬಗ್ಗೆ ಹಿರಿಯ ಅಧಿಕಾರಿಗಳು ಪರಿಶೀಲಿಸಬೇಕು. ಕೇಂದ್ರ ಸರ್ಕಾರಿ ಕಚೇರಿಗಳ ಕೆಲಸದ ಅವಧಿ ಬೆಳಗ್ಗೆ 9ಗಂಟೆಯಿಂದ ಸಂಜೆ 5.30ವರೆಗೆ ಇರುತ್ತದೆ. ಆದರೆ, ಕೆಲ ನೌಕರರು, ಅಧಿಕಾರಿಗಳು ಮಾತ್ರ ತಡವಾಗಿ ಆಫೀಸ್‌ಗೆ ಬಂದು, ಬೇಗ ವಾಪಸ್ ಹೋಗುತ್ತಾರೆ. ಇದರಿಂದ ಕೆಲಸದ ನಿಮಿತ್ತ ಕಚೇರಿಗಳಿಗೆ ಬರುವ ಸಾರ್ವಜನಿಕರಿಗೆ ಸಮಸ್ಯೆ ಆಗುತ್ತಿದೆ. ಹೀಗಾಗಿ ಹಾಜರಾತಿ ವಿಚಾರದಲ್ಲಿ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ.

error: Content is protected !!