ಪೋಕ್ಸೋ ಪ್ರಕರಣ ಎದುರಿಸುತ್ತಿದ್ದ ರಾಜೇಶ್ ಎಮ್‌ಗೆ ನಿರೀಕ್ಷಣಾ ಜಾಮೀನು: ಮಂಗಳೂರಿನ ಪೋಕ್ಸೋ ವಿಶೇಷ ನ್ಯಾಯಾಲಯದಿಂದ ಮಂಜೂರು:

ಬೆಳ್ತಂಗಡಿ: ಬಿಜೆಪಿ ಮಂಡಲ ಎಸ್ಟಿ ಮೋರ್ಚಾದ ಅಧ್ಯಕ್ಷ ಕಳೆಂಜ ಗ್ರಾಮದ ನಿವಾಸಿ ರಾಜೇಶ್ ಎಮ್. ಮೇಲೆ ದಾಖಲಾಗಿದ್ದ ಪೋಕ್ಸೋ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಇದೀಗ ಇವರಿಗೆ ಮಂಗಳೂರಿನ ಪೋಕ್ಸೋ ವಿಶೇಷ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಜೂ.4 ರಂದು ರಾತ್ರಿ ಕಳೆಂಜದಲ್ಲಿ ರಾಜೇಶ್ ಎಮ್. ಮೇಲೆ ಮಾರಾಣಾಂತಿಕ ಹಲ್ಲೆ ನಡೆದ ಘಟನೆಯಲ್ಲಿ ರಾಜೇಶ್ ಎಮ್. ಅಪ್ರಾಪ್ತ ಬಾಲಕಿ ಮೇಲೆ ಮಾನಭಂಗ ಯತ್ನಿಸಿದ ಎಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬಂಧನ ಭೀತಿ ಎದುರಿಸುತ್ತಿದ್ದ ರಾಜೇಶ್ ಎಂ.ಕೆ. ಪರ ನ್ಯಾಯಾಲಯದಲ್ಲಿ ಖ್ಯಾತ ವಕೀಲರಾದ ಶಂಭು ಶರ್ಮ ಮತ್ತು ಅಜಯ್ ಸುವರ್ಣ ವಾದಿಸಿದರು.

 

error: Content is protected !!