ಆನ್‌ಲೈನ್ ಹೂಡಿಕೆ ವಂಚನೆ: ಹುಬ್ಬಳ್ಳಿಯಲ್ಲಿ 2.39 ಕೋಟಿ ರೂ ಕಳೆದುಕೊಂಡ ದಂಪತಿ..!

ಹುಬ್ಬಳ್ಳಿ: ದುಡ್ಡು ಮಾಡುವ ಆತುರ, ಹೇಗಾದರೂ ಮಾಡಿ ಸಂಪಾದನೆ ಹೆಚ್ಚು ಮಾಡಿಕೊಳ್ಳಬೇಕು ಎಂದು ಜನ ಈಗ ಒಂದೇ ಕೆಲಸಕ್ಕೆ ಸೀಮಿತಗೊಳ್ಳದೆ ಬೇರೆ- ಬೇರೆ ಕೆಲಸ ಮಾಡಿ ಸಂಪಾದನೆ ಕಡೆ ಹೆಚ್ಚಿನ ಒಲವು ತೋರುತ್ತಿದ್ದಾರೆ. ಇನ್ನು ಕೆಲವರು ಇರುವ ಹಣವನ್ನೇ ಎಲ್ಲಾದರೂ ಇನ್ ವೆಸ್ಟ್ ಮಾಡಿ ಹೆಚ್ಚಿನ ಲಾಭ ಪಡೆಯುವ ಯೋಚನೆ ಮಾಡುತ್ತಾರೆ. ಯೋಚನೆ ಒಳ್ಳೆಯದೇ, ಆದರೆ ಹೂಡಿಕೆಗೂ ಮುನ್ನ ಬಹಳಷ್ಟು ಜಾಗರೂಕರಾಗಿರಬೇಕಿದೆ.

ಬ್ಲಾಕ್ ಟ್ರೇಡಿಂಗ್ ಹಾಗೂ ಐಪಿಒದಲ್ಲಿ ಹೆಚ್ಚಿನ ಲಾಭದ ಆಮಿಷವೊಡ್ಡಿ, ಹೂಡಿಕೆ ಮಾಡಲು ಪ್ರೇರೇಪಿಸಿ ನಿವೃತ್ತ ದಂಪತಿಗೆ 2.39 ಕೋಟಿ ರೂ. ವಂಚಿಸಿರುವ ಘಟನೆ ಹುಬ್ಬಳಿಯ ಕೇಶ್ವಾಪುರದಲ್ಲಿ ನಡೆದಿದೆ.

ದಿವ್ಯ ಹಾಗೂ ದೀಪಕ್ ಎಂಬುವರು ದಂಪತಿಗಳನ್ನು ಪರಿಚಯ ಮಾಡಿಕೊಂಡು, ಆನ್‌ಲೈನ್‌ನಲ್ಲಿ ಹಣ ಹೂಡಿಕೆ ಮಾಡಲು ತಿಳಿಸಿದ್ದಾರೆ. ಮೊದಲು 15,000 ರೂ. ಹೂಡಿಕೆ ಮಾಡಿದಾಗ, ಉತ್ತಮ ಲಾಭ ನೀಡಿದ್ದಾರೆ. ನಂತರ ವಿವಿಧ ಹಂತದಲ್ಲಿ ಮೇ 1ರಿಂದ ಜೂನ್ 12ರ ವರೆಗಿನ ಅವಧಿಯಲ್ಲಿ ಎರಡು ಬ್ಯಾಕ್ ಖಾತೆಗಳ ಮೂಲಕ ಒಟ್ಟು 2.39 ಕೋಟಿ ರೂ. ಹಣವನ್ನು ಹೂಡಿಕೆ ಮಾಡಿಸಿಕೊಂಡು ವಂಚಿಸಲಾಗಿದೆ. ಬಳಿಕ ದಂಪತಿಯ ಪುತ್ರಿ ಖಾತೆಗಳನ್ನು ಪರಿಶೀಲಿಸಿದಾಗ ವಂಚನೆಗೆ ಒಳಗಾಗಿರುವುದು ತಿಳಿದುಬಂದಿದೆ.

ಈ ಕುರಿತು ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ.

error: Content is protected !!