ನಟಿ ದಿ.ಪವಿತ್ರ ಜಯರಾಮ್ ಪ್ರಿಯತಮ ಆತ್ಮಹತ್ಯೆ: ಖಿನ್ನತೆಗೊಳಗಾಗಿ ನೇಣಿಗೆ ಶರಣಾದ ಚಂದ್ರಕಾಂತ್: ಕೊನೆಯುಸಿರೆಳೆಯೋ ಮುನ್ನ ಚಂದು ಜೊತೆ ಮಾತನಾಡಿದ್ದ ಪವಿತ್ರ

ಹೈದರಾಬಾದ್: ಕಾರ್ ಅಪಘಾತದಲ್ಲಿ ನಟಿ ಪವಿತ್ರಾ ಜಯರಾಮ್ ಅವರು ಮೇ.12ರಂದು ಸಾವನ್ನಪ್ಪಿದ್ದು ಈ ಬೆನ್ನಲ್ಲೆ ಅವರ ಪ್ರಿಯತಮ ಚಂದ್ರಕಾಂತ್ ಅವರು ಮೇ.17ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪವಿತ್ರ ಜಯರಾಮ್ ಅವರ ನಿಧನದ ಬಳಿಕ ಖಿನ್ನತೆಗೊಳಗಾಗಿದ್ದ ಅವರು ಆಂಧ್ರಪ್ರದೇಶದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಪಘಾತವಾದ ದಿನ ಪವಿತ್ರಾ ಜಯರಾಮ್ ಹಾಗೂ ಚಂದು ಅವರು ಅಕ್ಕ-ಪಕ್ಕ ಕೂತಿದ್ದು, ಅಪಘಾತ ಆಗುತ್ತಿದ್ದಂತೆ ಪವಿತ್ರಾ ಅವರು ಚಂದು ನೋಡಿ ಏನಾಯ್ತು ಅಂತ ಕೊನೆಯದಾಗಿ ಕೇಳಿದ್ದಾರೆ. ಆಗ ಚಂದುಗೆ ಗಾಯ ಆಗಿತ್ತು, ಬಳಿಕ ಪ್ರಜ್ಞೆ ತಪ್ಪಿದೆ. ನಂತರ ಪವಿತ್ರಾಗೆ ಬ್ರೇನ್ ಸ್ಟ್ರೋಕ್ ಆಗಿತ್ತು. ಆಂಬುಲೆನ್ಸ್ ಬರೋದು 20 ನಿಮಿಷ ತಡ ಆಗಿದ್ದರಿಂದ ಪವಿತ್ರಾ ಸಾವನ್ನಪ್ಪಿದ್ದರು ಎನ್ನಲಾಗಿದೆ.

ಘಟನೆಯ ಬಗ್ಗೆ ಅಂದು ಮಾಧ್ಯಮದ ಮುಂದೆ ಚಂದು ಮಾತನಾಡಿ, “ಪವಿತ್ರಾ ಮುಖದ ಮೇಲೆ, ದೇಹದ ಮೇಲೆ ಇದ್ದಿದ್ದು ನನ್ನ ರಕ್ತ. ಪವಿತ್ರಾಗೆ ಏನೂ ಆಗಿರಲಿಲ್ಲ. ನನಗೆ ಗಾಯ ಆಯ್ತು, ರಕ್ತ ಬಂತು ಅಂತ ಹೆದರಿ ಪವಿತ್ರಾ ಪ್ರಜ್ಞೆ ತಪ್ಪಿದ್ದಳು, ಬಳಿಕ ವೈದ್ಯರು ಹೃದಯಾಘಾತ, ಬ್ರೇನ್ ಸ್ಟ್ರೋಕ್ ಆಗಿದೆ” ಅಂತ ಹೇಳಿದ್ದರು ಎಂದಿದ್ದಾರೆ.

ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು, ಮದುವೆಯಾಗಲು ನಿಶ್ಚಯಿಸಿದ್ದರು. ಆದರೆ, ಒಂದೇ ವಾರದಲ್ಲಿ ಇಬ್ಬರೂ ದುರಂತ ಸಾವು ಕಂಡಿದ್ದಾರೆ.

error: Content is protected !!