ಉಜಿರೆ, ಪೇಟೆಯ ಸಮೀಪದಲ್ಲೇ ಇದೆ ಅಪಾಯಕಾರಿ ಒಣ ಮರ..!: ಮುರಿದು ಬಿದ್ದರೆ ಸಂಭವಿಸಬಹುದು ದೊಡ್ಡ ಅನಾಹುತ:

 

ಬೆಳ್ತಂಗಡಿ: ಇನ್ನು ಕೆಲವೇ ದಿನಗಳಲ್ಲಿ ಮಳೆಗಾಲ ಪ್ರಾರಂಭವಾಗಲಿದೆ. ಜಿಲ್ಲಾಡಳಿತ ಮಳೆಗಾಲದ ಪ್ರಕೃತಿ ವಿಕೋಪ ಎದುರಿಸಲು  ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ತಾಲೂಕಿನ ತಹಶೀಲ್ದಾರ್ ಅವರಿಗೆ ಮಾಹಿತಿಗಳನ್ನು ನೀಡಿದೆ. ಅದರೆ ಉಜಿರೆಯಲ್ಲೊಂದು ಒಣಗಿದ ರೀತಿಯಲ್ಲಿ ರಸ್ತೆ ಕಡೆಗೆ ವಾಲಿಕೊಂಡು ಅಪಾಯಕಾರಿ ಮರವೊಂದು ಇಂದು ನಾಳೆಯೋ  ಬೀಳುವ ಸ್ಥಿತಿಯಲ್ಲಿ ಇದೆ.

 

 

ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ಪುಂಜಾಲಕಟ್ಟೆಯಿಂದ ಚಾರ್ಮಾಡಿವರೆಗೆ  ಹಲವಾರು ಮರಗಳನ್ನು ತೆರವುಗೊಳಿಸಿದ್ದರೂ ಈ ಮರ ಮಾತ್ರ ಹಾಗೆಯೇ ಇದೆ.

 

 

ಉಜಿರೆ ಪೇಟೆ ಸಮೀಪವೇ ಇರುವ ಈ ರಸ್ತೆಯಲ್ಲಿ ದಿನಂಪ್ರತಿ ಸಾವಿರಾರೂ ವಾಹನಗಳು ಪಾದಾಚಾರಿಗಳು ಸಂಚಾರಿಸುತಿದ್ದು ಒಂದು ವೇಳೆ ಮರ  ಬಿದ್ದಲ್ಲಿ ದೊಡ್ಡ ಅನಾಹುತ ಸಂಭವಿಸಬಹುದು ಎಂಬ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

 

 

ಅದ್ದರಿಂದ ಈ ಮರವನ್ನು ತಕ್ಷಣ ತೆರವುಗೊಳಿಸಿ ಮುಂದೆ ನಡೆಯುವ ಸಂಭಾವ್ಯ ಅನಾಹುತ ತಪ್ಪಿಸುವಂತೆ   ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಸಂಬಂಧಪಟ್ಟವರಿಗೆ ವಿನಂತಿಸಿಕೊಳ್ಳುತಿದ್ದಾರೆ.

error: Content is protected !!