ಬೆಳ್ತಂಗಡಿ, ಮಳೆ, ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನ ಮರ:: ಗುರುವಾಯನಕೆರೆ ಆಲಿಕಲ್ಲು ಮಳೆ:ಉಕ್ಕಿ ಹರಿದ ಮೃತ್ಯುಂಜಯ ನದಿ:

 

 

ಬೆಳ್ತಂಗಡಿ: ತಾಲೂಕಿನಾದ್ಯಂತ  ಮಳೆಯಾಗಿದ್ದು,ಗುರುವಾಯನಕೆರೆಯಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ. ಅದಲ್ಲದೇ ಹಲವೆಡೆ ಗಾಳಿ ಹಾಗೂ ಸಿಡಿಲಬ್ಬರದಿಂದ ಮನೆಗಳಿಗೆ ಹಾನಿ ಸಂಭವಿಸಿದೆ. ಕೊಯ್ಯೂರಿನ ಮೈಂದಕೋಡಿ ಲೋಕಯ್ಯ ಗೌಡ ಎಂಬವರ ಮನೆ ಸಮೀಪದ ತೆಂಗಿನ ಮರಕ್ಕೆ ಸಿಡಿಲು ಬಡಿದ ಪರಿಣಾಮ ಹೊತ್ತಿ ಉರಿದಿದೆ.ಬಿಸಿಲಿನ ತಾಪಕ್ಕೆ ಎಲ್ಲಾ ನದಿಗಳು ಬತ್ತಿ ಹೋಗಿದ್ದು ನಿನ್ನೆ ರಾತ್ರಿ ಹಾಗೂ ಇಂದು ಬೆಳಗ್ಗೆ ಸುರಿದ ಭಾರೀ ಮಳೆಗೆ ಮೃತ್ಯುಂಜಯ ನದಿ ತುಂಬಿ ಹರಿಯುತಿದೆ. ಕೃಷಿ ತೋಟಗಳಿಗೆ ನೀರಿಲ್ಲದೇ ಕೃಷಿಕರು ಚಿಂತಿತರಾಗಿದ್ದು ಮಳೆಯಿಂದಾಗಿ ಸಂತಸ ಗೊಂಡಿದ್ದಾರೆ.

error: Content is protected !!