ಬೆಳ್ತಂಗಡಿ: ಕಾರೊಂದು ರಸ್ತೆ ಬದಿಯ ಮಣ್ಣಿನ ದಿಬ್ಬಕ್ಕೆ ಡಿಕ್ಕಿ ಹೊಡೆದು ಕಾರಿನಲ್ಲಿದ್ದವರು ಅಪಾಯದಿಂದ ಪಾರಾದ ಘಟನೆ ಗೇರುಕಟ್ಟೆ ಬಳಿ ಮೇ 14 ರಂದು ಸಂಜೆ ನಡೆದಿದೆ.
ಪುತ್ತೂರು ತಾಲೂಕಿನ ಕಬಕದ ಕುಟುಂಬವೊಂದು ಇನೋವಾ ಕಾರಿನಲ್ಲಿ ಬೆಳ್ತಂಗಡಿಯ ಪ್ರಸಿದ್ಧ ಧಾರ್ಮಿಕ ಸ್ಥಳ ಕಾಜೂರಿಗೆ ಭೇಟಿ ನೀಡಿ ಊರಿಗೆ ಹಿಂತಿರುಗುವ ವೇಳೆ ಗೇರು ಕಟ್ಟೆ ಬಳಿಯ ಸಂಬೋಳ್ಯ ಎಂಬಲ್ಲಿ ರಸ್ತೆ ಬದಿಯ ಮಣ್ಣಿನ ದಿಬ್ಬಕ್ಕೆ ಕಾರು ಡಿಕ್ಕಿ ಹೊಡೆದಿದೆ ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು ಅದೃಷ್ಟವಶಾತ್ ಕಾರಿನಲ್ಲಿದ್ದ ಇಬ್ಬರು ಗಂಡಸರು ಇಬ್ಬರು ಹೆಂಗಸರು ಚಿಕ್ಮ ಮಗು ಸೇರಿ ಮೂವರು ಮಕ್ಕಳು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.ಘಟನಾ ಸ್ಥಳದ ಪಕ್ಕದಲ್ಲೇ ವಿದ್ಯುತ್ ಟವರ್ ಕಂಬಗಳಿದ್ದು ದೊಡ್ಡ ಅನಾಹುತ ತಪ್ಪಿದಂತಾಗಿದೆ. ಅಪಘಾತಕ್ಕೆ ಚಾಲಕ ಅತೀ ವೇಗ ಅಥವಾ ನಿದ್ರೆ ಮಂಪರಿನಲ್ಲಿ ಈ ರೀತಿ ನಡೆದಿರಬಹುದು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.