ಬೆಳ್ತಂಗಡಿ: ಮುಳಿಯ ಜ್ಯುವೆಲ್ಸ್ ಚಿನ್ನೋತ್ಸವದ ಪ್ರಯುಕ್ತ: ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆ ‘ಚಿತ್ತಾರ – ಚಿಣ್ಣರ ಚಿತ್ರೋತ್ಸವ’

ಬೆಳ್ತಂಗಡಿ: ಬೇಸಿಗೆ ರಜೆಯಲ್ಲಿ ಮನೆಯಲ್ಲಿ ಸುಮ್ಮನೆ ಕೂತು ಕಾಲಕಳೆಯುವ ಮಕ್ಕಳಿಗೆ ಮುಳಿಯ ಜ್ಯುವೆಲ್ಸ್ ಬೆಳ್ತಂಗಡಿ ತನ್ನ ಚಿನ್ನೋತ್ಸವದ ಪ್ರಯುಕ್ತ ಚಿತ್ರಕಲೆ ಸ್ಪರ್ಧೆ ‘ಚಿತ್ತಾರ –        ಚಿಣ್ಣರ ಚಿತ್ರೋತ್ಸವ’ವನ್ನು ಆಯೋಜಿಸಿದೆ.

ಮೇ 11 ರಂದು ಬೆಳಗ್ಗೆ 10ಗಂಟೆಯಿAದ ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್ ನಲ್ಲಿ ಈ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ 1ರಿಂದ 6 ವರ್ಷ ಹಾಗೂ 6 ರಿಂದ 12 ವರ್ಷದ ಮಕ್ಕಳ 2 ವಿಭಾಗಗಳನ್ನು ಮಾಡಲಾಗಿದ್ದು, ಮಕ್ಕಳು ಸ್ವಂತ ಆಯ್ಕೆಯ ವಿಷಯದ ಮೇಲೆ ಚಿತ್ರ ಬಿಡಿಸಬಹುದು.

ಸ್ಪರ್ಧೆಗೆ ಬೇಕಾದ ಎಲ್ಲಾ ರೀತಿಯ ಪರಿಕರಗಳನ್ನು ಸ್ಪರ್ಧಿಗಳೇ ತರಬೇಕು. 2 ವಿಭಾಗದಲ್ಲೂ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳಿವೆ. ಫಲಿತಾಂಶ ದಿನವನ್ನು ಅಂದೇ ಘೋಷಿಸಲಾಗುವುದು.

ಸ್ಪರ್ಧೆಯ ನೋಂದಣಿಗಾಗಿ 8792530916 , 8792252916 ಈ ಸಂಖ್ಯೆಯನ್ನು ಸಂಪರ್ಕಿಸಲು ತಿಳಿಸಲಾಗಿದೆ.

error: Content is protected !!