
ಬೆಳ್ತಂಗಡಿ: ಕರ್ನಾಟಕ ರಾಜ್ಯದ ಮಧ್ಯ ದಕ್ಷಿಣ ಭಾಗದ ಬೆಸ್ಟ್ ಲೀಡರ್ಸ್ ಅವಾರ್ಡ್ಸ್–2025 ಹಾಗೂ ಉತ್ತಮ ಶಾಸಕ ಪ್ರಶಸ್ತಿಗೆ ಭಾಜನರಾದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ಹರೀಶ್ ಪೂಂಜ ಅವರನ್ನು ಸೇಕ್ರೆಡ್ ಹಾರ್ಟ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ (ನಿ.) ವತಿಯಿಂದ ಸನ್ಮಾನಿಸಲಾಯಿತು.
ಬೆಳ್ತಂಗಡಿ ತಾಲೂಕಿನ ಮಣ್ಣಿನ ಹೆಮ್ಮೆಯ ಮಗ, ಶ್ರಮಿಕ ಮನಸ್ಸಿನ ಸೇವಕ, ಸಂಘಟನೆ, ಸಂಸ್ಕೃತಿ ಹಾಗೂ ಸೇವೆಯನ್ನು ಅಸ್ತ್ರವಾಗಿಸಿಕೊಂಡು ಜನಸೇವೆಯಲ್ಲಿ ತೊಡಗಿಸಿಕೊಂಡಿರುವ ಶಾಸಕ ಹರೀಶ್ ಪೂಂಜ ಅವರನ್ನು ಸಂಸ್ಥೆಯ ವತಿಯಿಂದ ನಡೆದ ಸೊಸೈಟಿ ಆಡಳಿತ ಮಂಡಳಿ ಸಭೆಯಲ್ಲಿ ಗೌರವಿಸಲಾಯಿತು.
ಸಂಘದ ಅಧ್ಯಕ್ಷ ಲೆನ್ಸಿ ಪಿಂಟೋ ಹಾಗೂ ಉಪಾಧ್ಯಕ್ಷ ಫ್ರಾನ್ಸಿಸ್ ವಿ.ವಿ. ಅವರು ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದ ಪರವಾಗಿ ಶಾಸಕ ಹರೀಶ್ ಪೂಂಜ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಉತ್ತಮ ಶಾಸಕ ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು. ಸಾರ್ವಜನಿಕ ಸೇವೆಯಲ್ಲಿ ಅವರು ಸಲ್ಲಿಸುತ್ತಿರುವ ಸೇವೆಯನ್ನು ಸಂಸ್ಥೆಯ ವತಿಯಿಂದ ಶ್ಲಾಘಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯಚಟುವಟಿಕೆಗಳ ಕುರಿತು ಮಾತನಾಡಿದ ಆಡಳಿತ ಮಂಡಳಿ, ಸದಸ್ಯರ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಸಹಕಾರ ನೀಡುವ ಉದ್ದೇಶದಿಂದ ಸಂಸ್ಥೆಯು ಗೃಹ ಸಾಲ ಮತ್ತು ವಾಹನ ಸಾಲಗಳನ್ನು ಶೇ.11ರ ಬಡ್ಡಿದರದಲ್ಲಿ ನೀಡುತ್ತಿದೆ ಎಂದು ತಿಳಿಸಿತು. ಸದಸ್ಯರಿಗೆ ಅಗತ್ಯವಿರುವ ಸಂದರ್ಭಗಳಲ್ಲಿ ಸಾಲ ಸೌಲಭ್ಯ ಒದಗಿಸುವ ಮೂಲಕ ಅವರ ಕುಟುಂಬದ ಅಭಿವೃದ್ಧಿಗೆ ಸಂಸ್ಥೆ ಸಹಕಾರ ನೀಡುತ್ತಿದೆ ಎಂದು ತಿಳಿಸಲಾಯಿತು.
ಶಾಸಕ ಹರೀಶ್ ಪೂಂಜ ಅವರು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಕೈಗೊಳ್ಳಬಹುದಾದ ವಿವಿಧ ಯೋಜನೆಗಳು ಹಾಗೂ ಭವಿಷ್ಯದ ಅಭಿವೃದ್ಧಿ ಕಾರ್ಯಗಳ ಕುರಿತು ತಮ್ಮ ಅಭಿಪ್ರಾಯ ಮತ್ತು ಯೋಜನೆಗಳನ್ನು ಹಂಚಿಕೊಂಡರು. ಕ್ಷೇತ್ರದ ಅಭಿವೃದ್ಧಿ, ಮೂಲಸೌಕರ್ಯ ಹಾಗೂ ಜನರಿಗೆ ಅಗತ್ಯವಿರುವ ವಿವಿಧ ಸೌಲಭ್ಯಗಳ ಕುರಿತು ಅವರು ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿದರು.
ಶಾಸಕರೊಂದಿಗೆ ನಡೆದ ಸಂವಾದವು ಸಂಸ್ಥೆಯ ಆಡಳಿತ ಮಂಡಳಿ, ಮುಖ್ಯ ಸಲಹೆಗಾರರು ಹಾಗೂ ಸಿಬ್ಬಂದಿ ವರ್ಗಕ್ಕೆ ಉತ್ತಮ ಅನುಭವವನ್ನು ನೀಡಿತು. ಬೆಳ್ತಂಗಡಿ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಶಾಸಕರು ಹಂಚಿಕೊಂಡ ವಿಚಾರಗಳು ಹಾಗೂ ಯೋಜನೆಗಳ ಬಗ್ಗೆ ಸಂಸ್ಥೆಯ ವತಿಯಿಂದ ಮೆಚ್ಚುಗೆ ವ್ಯಕ್ತಪಡಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯ ಸಲಹೆಗಾರರಾದ ಮೋನಪ್ಪ ಪೂಜಾರಿ, ಸಂಘದ ವೃತ್ತಿಪರ ನಿರ್ದೇಶಕರಾದ ಲಿಯೋ ನರೋನ್ಹಾ, ಫೆಲಿಕ್ಸ್ ಡಿ. ಕೋಸ್ತಾ, ನಿರ್ದೇಶಕರಾದ ಸಿರಿಲ್ ಸಿಕ್ವೇರಾ, ಜೋಯಲ್ ಗೋಡ್‌ಫ್ರಿ ಮೆಂಡೋನ್ಸಾ, ಗ್ರೆಗೋರಿ ಸೆರಾ, ರೊನಾಲ್ಡ್ ಸಿಕ್ವೇರಾ, ಗ್ರೇಸಿ ರೀಟಾ ರೆಬೆಲ್ಲೊ, ವಿವೇಕ್ ವಿನ್ಸೆಂಟ್ ಪಾಯಸ್, ಮೋಲಿ ಫೆರ್ನಾಂಡಿಸ್, ಲಿಯೋ ರೊಡ್ರಿಗಸ್, ಸೆಲೆಸ್ಟಿನ್ ಡಿ. ಸೊಜಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಲೆರಿಯನ್ ಡಿ. ಸೊಜಾ, ಸಿಬ್ಬಂದಿಗಳಾದ ಡೋನ್ ಪ್ರವೀಣ್ ಕ್ರಾಸ್ತಾ, ಶ್ವೇತಾ ರಾವ್, ಜೀವನ್, ರಮೇಶ್ ಹಾಗೂ ಅಲ್ವಿನ್ ಪಿಂಟೋ ಉಪಸ್ಥಿತರಿದ್ದರು.