ನವದೆಹಲಿ: ನೂರಾರು ಮಿಲಿಯನ್ ಬಳಕೆದಾರರ ವಾಟ್ಸ್ ಆ್ಯಪ್‌ನ ಮೆಸೇಜಿಂಗ್ ಎನ್‌ಕ್ರಿಪ್ಶನ್ ನ ನಿಯಮವನ್ನು ತೆಗೆದುಹಾಕಲು ಕೇಂದ್ರ ಸರಕಾರ ಒತ್ತಾಯಿಸಿದ್ದು ಈ ಒತ್ತಡ ಹೆಚ್ಚಾದರೆ ಭಾರತದ ಮಾರುಕಟ್ಟೆಯಿಂದ ನಿರ್ಗಮಿಸುವುದಾಗಿ ಮೆಟಾದ ವಾಟ್ಸ್ ಆ್ಯಪ್ ಹೇಳಿದೆ.
ಪ್ರತೀ ದಿನ ಅಪ್ ಡೇಟ್ ಆಗುತ್ತಿರುವ ವಾಟ್ಸ್ ಆಪ್, ಬಳಕೆದಾರರ ವೈಯುಕ್ತಿಕ ವಿಚಾರಗಳನ್ನು ಗೌಪ್ಯವಾಗಿ ಇಡಲಾಗುತ್ತದೆ ಎಂದು ತನ್ನ ಸ್ಟೇಟಸ್ ಮೂಲಕ ಈಗಾಗಲೆ ತಿಳಿಸಿದೆ. ಅಲ್ಲದೆ ವ್ಯಕ್ತಿಯ ಖಾಸಗಿ ಗೌಪ್ಯತೆಯನ್ನು ಕಾಪಾಡಿಕೊಂಡು ಬಂದಿದೆ. ಆದರೆ ಈ ಮಧ್ಯೆ ಈ ಎನ್‌ಕ್ರಿಪ್ಶನ್ ನಿಯಮವನ್ನು ತೆಗೆದು ಹಾಕಬೇಕು ಎಂದು ಕೇಂದ್ರ ಸರಕಾರ ಒತ್ತಾಯಿಸಿದೆ.
ಕೇಂದ್ರ ಸರಕಾರ ಈ ರೀತಿಯಾಗಿ ಒತ್ತಾಯಿಸಲು ಕಾರಣ ರಾಷ್ಟ್ರೀಯ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆ ಅಥವಾ ಅತ್ಯಾಚಾರ, ಅಶ್ಲೀಲ ವಿಷಯ ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬAಧಿಸಿದ ಅಪರಾಧಗಳಿಂದ ರವಾನೆಯಾಗುವ ಸಂದೇಶಗಳ ಬಗ್ಗೆ ಮಾಹಿತಿ ಪಡೆಯಲು. ತನಿಖಾಧಿಕಾರಿಗಳು ಈ ರೀತಿಯ ಮಾಹಿತಿ ಪಡೆಯಬೇಕೆಂದರೆ ವಾಟ್ಸ್ ಆ್ಯಪ್‌ನ ಮೆಸೇಜಿಂಗ್ ಎನ್‌ಕ್ರಿಪ್ಶನ್ ನ ತೆಗೆಯಬೇಕಾಗುತ್ತದೆ. ಎನ್‌ಕ್ರಿಪ್ಶನ್ ತೆಗೆಯೋದರಿಂದ ಯಾರು ಪ್ರಥಮವಾಗಿ ಸಂದೇಶ ಕಳುಹಿಸಿದ್ದಾರೆ ಎಂಬುದನ್ನು ಕಂಡು ಹಿಡಿಯಲು ಸಾಧ್ಯವಿದೆ. ಅಲ್ಲದೆ ನ್ಯಾಯಾಲಯ ಅಂಗೀಕರಿಸಿದ ನ್ಯಾಯಾಂಗ ಆದೇಶ ಇದನ್ನು ಪತ್ತೆ ಹಚ್ಚಲು ತನಿಖಾ ಸಂಸ್ಥೆಗಳಿಗೆ ಐಟಿ ನಿಯಮ 2021 ಸಹಾಯ ಮಾಡಲಿದೆ. ತನಿಖಾಧಿಕಾರಿಗಳು ಕೇಳಿದಾಗ ಆ ಮಾಹಿತಿಯನ್ನು ಮೆಸೇಜಿಂಗ್ ಕಂಪನಿಗಳು ಒದಗಿಸಬೇಕಾಗುತ್ತದೆ. ಮಾಹಿತಿ ತಂತ್ರಜ್ಞಾನ 2009 ರ 69ನೇ ಸಕ್ಷಮ ಪ್ರಾಧಿಕಾರದ (ಮಾಹಿತಿ ಪ್ರತಿಬಂಧಕ, ಮೇಲ್ವಿಚಾರಣೆ ಮತ್ತು ಡಿ ಕ್ರಿಪ್ಶನ್‌ಗಾಗಿ ಕಾರ್ಯವಿಧಾನ ಮತ್ತು ಸುರಕ್ಷತೆ) ನಿಯಮಗಳು ಹೇಳುತ್ತವೆ. ಈ ನಿಯಮವಿದ್ದರೂ ಮೆಟಾ ಒಪ್ಪಿಕೊಂಡಿಲ್ಲ.
ದೆಹಲಿ ಹೈಕೋರ್ಟ್‍ನಲ್ಲಿ ನಡೆದ ಈ ವಾದದಲ್ಲಿ ವಾಟ್ಸ್ ಆ್ಯಪ್‌ನ ಪರ ವಾದಿಸಿದ ವಕೀಲ ತೇಜಸ್ ಕರಿಯಾ ಅವರು ತನಿಖಾ ಸಂಸ್ಥೆಗಳಿಗೆ ಸಂದೇಶ ಕಳುಹಿಸಿದ ಮೂಲವನ್ನು ಕಂಡು ಹಿಡಿಯುವ ಐಟಿ ನಿಯಮದ ಪ್ರಕಾರ ಮಾಹಿತಿ ನೀಡಲು ಸಾಧ್ಯವಿಲ್ಲ. ಎನ್‌ಕ್ರಿಪ್ಶನ್ ತೆಗೆದು ಹಾಕಲು ಆಗಲ್ಲ. ಒಂದೊಮ್ಮೆ ಮಾಹಿತಿ ನೀಡಲೇಬೇಕು ಎಂಬ ಒತ್ತಾಯ ಮಾಡಿದರೆ ತಾನು ಭಾರತೀಯ ಮಾರುಕಟ್ಟೆಯಿಂದ ಹೊರ ಹೋಗುವುದಾಗಿ ಹೇಳಿದೆ. ಜೊತೆಗೆ ಗ್ರಾಹಕರ ಗೌಪ್ಯತೆ ಕಾಪಾಡುವ ಜವಾಬ್ದಾರಿ ನಮ್ಮ ಮೇಲೆ ಇರುವುದರಿಂದ ಹೀಗೆ ಹೇಳುತ್ತಿದ್ದೇವೆ. ಎಂಡ್-ಟು-ಎAಡ್ ಎನ್‌ಕ್ರಿಪ್ಶನ್ ಅನ್ನು ಮುರಿಯಲು ಕಂಪನಿಯನ್ನು ಒತ್ತಾಯಿಸುವುದರಿಂದ ವಾಟ್ಸ್ ಆ್ಯಪ್ ಬಳಸುವ ನೂರಾರು ಮಿಲಿಯನ್ ಬಳಕೆದಾರರ ಗೌಪ್ಯತೆ ಮತ್ತು ಮುಕ್ತ ಭಾಷಣದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದಂತಾಗುತ್ತದೆ. ಯಾವ ಸಂದೇಶಗಳನ್ನು ಡೀಕ್ರಿಪ್ಟ್ ಮಾಡಲು ಕೇಳಲಾಗುತ್ತದೆ ಎಂದು ನಮಗೆ ತಿಳಿದಿಲ್ಲ. ಇದರರ್ಥ ಲಕ್ಷಾಂತರ ಮತ್ತು ಮಿಲಿಯನ್ ಸಂದೇಶಗಳನ್ನು ಹಲವಾರು ವರ್ಷಗಳವರೆಗೆ ಸಂಗ್ರಹಿಸಬೇಕಾಗುತ್ತದೆ. ಗೌಪ್ಯತೆ ನಿಯಮವನ್ನು ತೆಗೆದು ಹಾಕಿದರೆ ವ್ಯಕ್ತಿಯ ಮೂಲಭೂತ ಹಕ್ಕಿನ ಉಲ್ಲಂಘನೆ ಆಗುತ್ತದೆ ಎಂದಿದೆ.