ಬೆಳ್ತಂಗಡಿಯ ಕುಗ್ರಾಮ ಬಾಂಜಾರು ಮಲೆಯಲ್ಲಿ ಶೇ. 100 ಮತದಾನ: ಜಾಗೃತಿ ಮೆರೆದ ಮತದಾರರಿಗೆ ಶಾಸಕ ಹರೀಶ್ ಪೂಂಜ ಅಭಿನಂದನೆ:

 

 

 

ಬೆಳ್ತಂಗಡಿ: ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ನೆರಿಯ ಗ್ರಾಮದ ಬಾಂಜಾರು ಮಲೆ ಮತಗಟ್ಟೆ 86ರಲ್ಲಿ ಶೇಕಡಾ100% ಮತದಾನವಾಗಿರುವುದಕ್ಕೆ ಶಾಸಕ ಹರೀಶ್ ಪೂಂಜ ಸಂತಸ ವ್ಯಕ್ತಪಡಿಸಿದ್ದಾರೆ.
ಆರೋಗ್ಯಕರ ಪ್ರಜಾಪ್ರಭುತ್ವದ ಈ ಐತಿಹಾಸಿಕ ದಾಖಲೆ ನನ್ನ ವಿಧಾನಸಭಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ನಿರ್ಮಾಣವಾದದ್ದು ನಿಜಕ್ಕೂ ಹೆಮ್ಮೆ ಪಡುವಂತಹ ವಿಚಾರವಾಗಿದೆ. ಇದಕ್ಕೆ ಕಾರ್ಣೀಕರ್ತರಾದ ಎಲ್ಲಾ ಮತದಾರ ಭಾಂದವರಿಗೂ ಪ್ರೇರಣೆ ನೀಡಿದ ಚುನಾವಣಾ ಆಯೋಗಕ್ಕೂ ಮನದಾಳದ ಅಭಿನಂದನೆಗಳನ್ನು ಶಾಸಕ ಹರೀಶ್ ಪೂಂಜ ತಿಳಿಸಿದ್ದಾರೆ.

error: Content is protected !!