ಸಪ್ತಪದಿ ತುಳಿದು ಮತದಾನ ಕೇಂದ್ರಕ್ಕೆ ಹೆಜ್ಜೆಯಿಟ್ಟ ನವ ವಿವಾಹಿತರು: ಮದುವೆ ಸಂಭ್ರಮದ ನಡುವೆ ಮತದಾನ ಮರೆಯದೆ ಹಕ್ಕು ಚಲಾವಣೆ: ಮತದಾನದೊಂದಿಗೆ ನವಜೀವನಕ್ಕೆ ಕಾಲಿಟ್ಟ ವಧು- ವರರ ನಡೆಗೆ ವ್ಯಾಪಕ ಮೆಚ್ಚುಗೆ..

 

 

ಬೆಳ್ತಂಗಡಿ:  ಚುನಾವಣಾ ಸಂಭ್ರಮದ ಜೊತೆ ತಾಲೂಕಿನಲ್ಲಿ ಇಂದು ಮದುವೆ ಸಂಭ್ರಮವೂ ಮನೆ ಮಾಡಿತ್ತು. ಹಲವು ನವ ವಿವಾಹಿತರು ಮದುವೆ ಸಂಭ್ರಮದ ನಡುವೆಯೂ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡುವ ಮೂಲಕ ತಮ್ಮ ಜವಾಬ್ದಾರಿ ಮೆರೆದಿದ್ದಾರೆ. ಅದೇ ಅವರ ಸಂಬಂಧಿಕರೂ ಮತದಾನ ಮಾಡುವ ಮೂಲಕ ಮತದಾನದ ಮಹತ್ವ ಸಾರಿದ್ದಾರೆ.
ಮುಂಡಾಜೆ ಗ್ರಾಮದ ಕೂಳೂರು ನಿವಾಸಿ ಗೋಪಾಲ ಪೂಜಾರಿ ಅವರ ಪುತ್ರ ಸುರೇಶ್ ಕುಮಾರ್ ಅವರ ವಿವಾಹ ಲಾಯಿಲ ಗ್ರಾಮದ ಶ್ರೀಧರ ಪೂಜಾರಿ ಅವರ ಪುತ್ರಿ ತುಳಸಿ ಅವರೊಂದಿಗೆ ಬೆಳ್ತಂಗಡಿಯ ಶ್ರೀ ಮಂಜುನಾಥ ಕಲಾಭವನದಲ್ಲಿ ಜರಗಿತು.
ವಧು-ವರರು ಹಸೆಮಣೆಯಿಂದ ನೇರ ಮತಕೇಂದ್ರಗಳಿಗೆ ಆಗಮಿಸಿ,ವಧು ಲಾಯಿಲದ ದ.ಕ. ಜಿ.ಪಂ  ಹಿರಿಯ ಪ್ರಾಥಮಿಕ ಶಾಲೆಯ  ಬೂತ್ 65ರಲ್ಲಿ ಹಾಗೂ ವರ ಮುಂಡಾಜೆ ಬೂತ್ 73ರಲ್ಲಿ ಮತ ಚಲಾಯಿಸಿದರು.ಅದೇ ರೀತಿ ಮುಂಡಾಜೆ ಗ್ರಾಮದ ಸೋಮಂತಡ್ಕ ನಿವಾಸಿ ರಾಜ ಗೋಪಾಲ ದೇವಾಂಗ ಅವರ ಪುತ್ರ ಸುಶಾಂತ್ ವಿವಾಹ ಉಜಿರೆ ಗ್ರಾಮದ ನೇಕಾರ ಪೇಟೆಯ ಸೇಸಪ್ಪ ನೇಕಾರರ ಪುತ್ರಿ ಪವಿತ್ರಾ ಅವರೊಂದಿಗೆ ಕಟೀಲಿನಲ್ಲಿ ಏ.26ರಂದು ಜರಗಿತು.
ವಧು-ವರರು ಹಸೆಮಣೆಯಿಂದ ನೇರ ಮತಕೇಂದ್ರಗಳಿಗೆ ಆಗಮಿಸಿ,ವಧು ಉಜಿರೆಯ ಬೂತ್ 98ರಲ್ಲಿ ಹಾಗೂ ವರ ಮುಂಡಾಜೆ ಬೂತ್ 72ರಲ್ಲಿ ಮತ ಚಲಾಯಿಸಿದರು.

error: Content is protected !!