ಓಡೀಲು ಕ್ಷೇತ್ರದಲ್ಲಿ 5 ನೇ ದಿನದ ಬ್ರಹ್ಮಕಲಶೋತ್ಸವ: ವೈದಿಕ ಕಾರ್ಯಕ್ರಮ, ಯಕ್ಷಗಾನ ತಾಳಮದ್ದಳೆ: ಭಜನಾ‌ ಕಾರ್ಯಕ್ರಮ: ಸಂಜೆ ಸಾಂಸ್ಕೃತಿಕ ಝೇಂಕಾರ: ಆಳ್ವಾಸ್ ನೃತ್ಯ ವೈಭವದ ಜನಪದ ಸಮ್ಮಿಲನ

ಬೆಳ್ತಂಗಡಿ: ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಅಷ್ಟಬಂಧ ‌ಬ್ರಹ್ಮಕಲಶೋತ್ಸವ 5 ನೇ ದಿನಕ್ಕೆ ಪಾದಾರ್ಪಣೆ ಮಾಡಿದ್ದು ಶ್ರೀ ದೇವರಿಗೆ ಇಂದು ಬ್ರಹ್ಮಕಲಶಾಭಿಷೇಕ‌ ನಡೆದಿದೆ. ಬಳಿಕ ನ್ಯಾಸಪೂಜೆ, ಮಹಾಪೂಜೆ, ಧ್ವಜಾರೋಹಣ, ಪಲ್ಲಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ‌ನಡೆಯಲಿದೆ.

ಮಧ್ಯಾಹ್ನ 2 ಗಂಟೆಯಿಂದ ‘ವಾಲಿಮೋಕ್ಷ’ ಯಕ್ಷಗಾನ ತಾಳಮದ್ದಳೆ, ಸಂಜೆ 5 ಗಂಟೆಯಿಂದ ಶ್ರೀ ಪಂಚಶ್ರೀ ಮಹಿಳಾ ಭಜನಾ ಮಂಡಳಿ ಬಳೆಂಜ ಇವರಿಂದ ಭಜನಾ‌ ಕಾರ್ಯಕ್ರಮ, ಸಾಯಂಕಾಲ 6 ಗಂಟೆಯಿಂದ ಉತ್ಸವ ಬಲಿ, ನಿತ್ಯಬಲಿ, ರಂಗಪೂಜೆ ನಡೆಯಲಿದೆ.

ಸಂಜೆ 06ಗಂಟೆಯಿಂದ ಶ್ರೀ ವೇದವ್ಯಾಸ ಶಿಶುಮಂದಿರ ಗುರುವಾಯನಕೆರೆ ಪುಟಾಣಿಗಳಿಂದ ಮತ್ತು ಬಾಲಗೋಕುಲ ಮಕ್ಕಳು ಹಾಗೂ ಹಳೆವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಝೇಂಕಾರ ನಡೆಯಲಿದೆ‌.

ರಾತ್ರಿ 7:30 ರಿಂದ ಶಶಿಧರ ಶೆಟ್ಟಿ ನವಶಕ್ತಿ ಬರೋಡ ಇವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು‌ ಬಳಿಕ ರಾತ್ರಿ 09 ರಿಂದ ಆಳ್ವಾಸ್ ವಿದ್ಯಾರ್ಥಿಗಳಿಂದ ‘ಆಳ್ವಾಸ್ ನೃತ್ಯ ವೈಭವದ ಜನಪದ ಸಮ್ಮಿಲನ’ ಮೂಡಿಬರಲಿದೆ.

error: Content is protected !!