ಕೃಷಿಕರೇ ಎಚ್ಚರ…!!! ತೋಟದೊಳಗೆ ಕಾಲಿಡುವಾಗ ಬುಸ್ ಬುಸ್…!!!: ಬಿಸಿಲಿನಲ್ಲಿ ತೋಟಕ್ಕೆ ಹೋಗುವ ಮುನ್ನ ಜಾಗ್ರತೆ, ಕಿವಿಗೆ ಹಾಕಿಕೊಳ್ಳಿ ಉರಗ ಪ್ರೇಮಿಗಳ ಸಲಹೆ: ಬಿಸಿಲಿನಿಂದ ಉರಗಗಳಿಗೂ ಬೇಕು ರಕ್ಷಣೆ, ತಂಪು ತಾಣಗಳತ್ತ ಸರೀಸೃಪಗಳು: ಕೃಷಿಕರಿಗೆ ಬೆಳ್ತಂಗಡಿಯ ಸ್ನೇಕ್ ಅಶೋಕ್ ನೀಡಿದ್ದಾರೆ ಅತ್ಯುತ್ತಮ ಮಾಹಿತಿ…!!!

ಬೆಳ್ತಂಗಡಿ: ದಿನದಿಂದ ದಿನ ಬಿಸಿಲಿನ ತಾಪ ಹೆಚಾಗುತ್ತಿದೆ. ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ಅತೀ ಹೆಚ್ಚು ಉರಿಬಿಸಿಲಿದ್ದು ನೆಲದ ತಾಪವೂ ಹೆಚ್ಚಾಗಿದೆ. ಈ ಸುಡು ಬಿಸಿಲು ಮಾನವರಿಗೆ ಮಾತ್ರ ಸಂಕಷ್ಟ ತರದೆ ಪ್ರಾಣಿಗಳಿಗೆ, ಸರಿಸೃಪಗಳಿಗೆ, ಇತರೇ ಜೀವಿಗಳಿಗೂ ಸಂಕಷ್ಟ ತಂದಿಟ್ಟಿದೆ.

ಹಾವುಗಳನ್ನು ಅತಿಯಾಗಿ ಪ್ರೀತಿಸಿ, ಅವುಗಳನ್ನು ರಕ್ಷಿಸುವ ಸ್ನೇಕ್ ಅಶೋಕ್ ಕುಮಾರ್ ಲಾಯಿಲಾ ಅವರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಎಷ್ಟೇ ಬಿಸಿಲಿದ್ದರೂ ತೋಟಗಳು ಮಾತ್ರ ತಂಪಾಗಿರುತ್ತದೆ.

 

 

ಹನಿ ನೀರಾವರಿಯಿಂದ ತೋಟ ತಂಪಾಗಿರುವ ಕಾರಣ ಹಾವುಗಳು ಹೆಚ್ಚಾಗಿ ತೋಟದಲ್ಲಿರುತ್ತದೆ. ಹೀಗಾಗಿ ಕೃಷಿಕರು ತೋಟಕ್ಕೆ ಸ್ಪಿಂಕ್ಲರ್ ಅಥವಾ ಪಂಪ್ ಚಾಲನೆ ಮಾಡಲು ಹೋಗುವಾಗ ಎಚ್ಚರಿಕೆಯಿಂದ ಸಂಚರಿಸಬೇಕು ಎಂದಿದ್ದಾರೆ. ರಾತ್ರಿ ಹೊತ್ತು ಜೊತೆಗೆ ಪ್ರಕಾಶಮಾನವಾದ ಲೈಟ್ ಅಥವಾ ಬೆಳಕಿನ ವ್ಯವಸ್ಥೆ ಮಾಡಿಕೊಳ್ಳಿ, ಮಕ್ಕಳನ್ನು ತೋಟಕ್ಕೆ ಕರೆದುಕೊಂಡು ಹೋಗಬೇಡಿ, ಕಾಲಿಗೆ ಬೂಟ್ ಶೂ ಧರಿಸಿಕೊಳ್ಳಿ ಕಿಟಕಿ ಬಾಗಿಲಿನ ಬಗ್ಗೆ  ಎಚ್ಚರ ಇರಲಿ. ಒಂದು ವೇಳೆ ಯಾವುದಾದರೂ ಹಾವು ಕಚ್ಚಿದರೆ ಹೆದರಬಾರದು ಕಚ್ಚಿದಲ್ಲಿ ಶುದ್ಧ ನೀರಿನಲ್ಲಿ ತೊಳೆಯಬೇಕು, ನೀರು ಕುಡಿಯಬಾರದು, ನಿದ್ದೆ ಮಾಡಬಾರದು, ನಾಟಿ ಮದ್ದು  ಮಾಡದೇ    ತಕ್ಷಣ  ಆಸ್ಪತ್ರೆಗೆ ಹೋಗಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳ ಬೇಕು.ಮನೆಯ  ಸುತ್ತಮುತ್ತ  ಸ್ವಲ್ಪ ದೂರದಲ್ಲಿ‌ ಅಲ್ಲಲ್ಲಿ ನೀರು  ಸಂಗ್ರಹಿಸಿಟ್ಟರೆ  ಉತ್ತಮ ಎಂಬ ಸಲಹೆಯನ್ನು ನೀಡಿದ್ದಾರೆ.

error: Content is protected !!