ಗುರುವಾಯನಕೆರೆ ಕಾರು ಪಲ್ಟಿಯಾಗಿ ಚಾಲಕ ಸಾವು: ಮೃತರ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ :

 

 

ಬೆಳ್ತಂಗಡಿ: ಗುರುವಾಯನಕೆರೆ ಶಕ್ತಿನಗರದ ಬಳಿ ಇಂದು ಮಧ್ಯಾಹ್ನ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಕಾರು ಚಲಾಯಿಸುತಿದ್ದ  ಬೆಳ್ತಂಗಡಿ ‌ಹಾಗೂ ಉಜಿರೆಯಲ್ಲಿರುವ  ರಬ್ಬರ್ ಇಂಡಿಯ  ಅಂಗಡಿಯ ಮಾಲಕ ವಿ.ವಿ ಮ್ಯಾಥ್ಯೂ ಅವರ ಮಗ ಪ್ರೈಸ್ ಮ್ಯಾಥ್ಯೂ ಸಾವನ್ನಪ್ಪಿ ಇಬ್ಬರು ಗಾಯಗೊಂಡಿದ್ದರು. ಸಾವನ್ನಪ್ಪಿದ್ದ ಪ್ರೈಸ್  ಮ್ಯಾಥ್ಯೂ ಅವರ ಲಾಯಿಲದಲ್ಲಿರುವ ಮಾರ್ನಿಂಗ್ ಸ್ಟಾರ್  ಮನೆಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ‌ ಭೇಟಿ ನೀಡಿ, ಪಾರ್ಥಿವ ಶರೀರದ ಅಂತಿಮ ದರ್ಶನ ಮಾಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು .‌ಈ ವೇಳೆ ವಿ.ಸಿ. ಸೆಬಾಸ್ಟಿಯನ್,ವಿಜಯ ಸ್ವಿಕೇರಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!