ಬೆಳ್ತಂಗಡಿ: ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ರೂ ದನಕಳ್ಳರು ಮಾತ್ರ ಕ್ಯಾರೇ ಅನ್ನದೇ ಹಗಲಲ್ಲೂ ರಾತ್ರಿಯಲ್ಲೂ ಗೋವುಗಳನ್ನು ಹಿಡಿದು ಹಿಂಸಾತ್ಮಕ ರೀತಿಯಲ್ಲಿ ಸಾಗಿಸುತ್ತಿದ್ದಾರೆ. ಕೊಕ್ಕಡದ ಶಬರಾಡಿ ಎಂಬಲ್ಲಿ ಮೇಯಲೆಂದು ತೋಟದಲ್ಲಿ ಕಟ್ಟಿದ ದನ, ಮಧ್ಯಾಹ್ನದ ಹೊತ್ತಿಗೆ ನಾಪತ್ತೆಯಾಗಿದೆ.
ಮಾ.26ರ ಮಧ್ಯ ರಾತ್ರಿ ಸುಮಾರು 1:30ರ ಹೊತ್ತಿಗೆ, ಬೆಳ್ತಂಗಡಿ ನಗರ ವ್ಯಾಪ್ತಿಯ ಹಳೇಕೋಟೆ ಬಳಿ ದನಕಳ್ಳರ ಗುಂಪು ದನವೊಂದನ್ನು ಹಿಡಿದು ಕಾರಿನಲ್ಲಿ ತುಂಬಿಸಿಕೊAಡು ಹೋಗಿದ್ದಾರೆ. ಈ ಎರಡು ಕಳ್ಳತನ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಗೋ ಕಳ್ಳರ ಹಾವಳಿ ದಿನದಿಂದ ದಿನ ಹೆಚ್ಚಾಗುತ್ತಿದೆ.
ಈಗ ಚುನಾವಣೆಯ ಸಮಯ ಎಲ್ಲಾ ಕಡೆ ಪೊಲೀಸ್ ಸಹಿತ ಚೆಕ್ ಪೋಸ್ಟ್ ಅಳವಡಿಸಿ ಪ್ರತಿಯೊಂದು ವಾಹನ ಸಂಚಾರದ ಚಲನವಲನಗಳನ್ನು ರಾತ್ರಿ ಹಗಲೆನ್ನದೇ ಸೂಕ್ಷ್ಮವಾಗಿ ಗಮನಿಸಿದರೂ ವಾಹನದಲ್ಲಿ ಸಾಗಾಟವಾಗುವ ಗೋವುಗಳು ಯಾಕೆ ಕಾಣುತ್ತಿಲ್ಲ ಎಂಬ ಪ್ರಶ್ನೆ ಉದ್ಭವವಾಗಿದೆ. ಇದರ ಹಿಂದೆ ಇರುವ ಪ್ರಭಾವಿ ಶಕ್ತಿ ಯಾವುದು? ಈ ಸಮಯದಲ್ಲೂ ಎಗ್ಗಿಲ್ಲದೇ ನಡೆಯುವ ಕೃತ್ಯಗಳ ಹಿಂದೆ ಇರುವ ಕಾಣದ ಕೈಗಳು ಯಾವುದು? ಪೊಲೀಸ್ ಇಲಾಖೆ ಯಾಕೆ ಕೈ ಕಟ್ಟಿ ಕುಳಿತಿದೆ? ತಿಂಗಳ ಹಪ್ತಾದ ಅಡ್ಜೆಸ್ಟ್ ಮೆಂಟ್ ಏನಾದರೂ ಇದೆಯೇ..?
ಈ ರೀತಿಯಾಗಿ ಗೋಕಳ್ಳತನ ಮಾಡೋದು ಕಾನೂನು ರೀತಿಯಲ್ಲಿ ತಪ್ಪು ಅಂತ ಇದೆ. ಆದರೆ ಕಾನೂನಿಗೆ ಬೆಲೆನೆ ಇಲ್ಲ. ಹಾಗಾದರೆ ಯಾಕೆ ಈ ಕಾಯ್ದೆ, ಯಾಕೆ ಕಾನೂನು? ಇದನ್ನು ಪಾಲಿಸಬೇಕಾದವರು ಯಾರು? ಕಾನೂನು ಪಾಲಿಸದೇ ಹೋದ್ರೂ ಶಿಕ್ಷೆ ಇಲ್ವಾ..? ಈ ರೀತಿ ದನ ಕಳ್ಳತನ ನಿಲ್ಲೋದು ಯಾವಾಗ? ಎಂಬ ಪ್ರಶ್ನೆ ಸಾರ್ವಜನಿಕರದ್ಧಾಗಿದೆ.