ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿತ: ಅವಶೇಷಗಳ ಅಡಿಯಲ್ಲಿ ಸಿಲುಕಿದ 30 ಕಾರ್ಮಿಕರು: ಓರ್ವ ವ್ಯಕ್ತಿ ಸಾವು!

ಪಟನಾ : ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದು ಓರ್ವ ಕಾರ್ಮಿಕ ಸಾವನ್ನಪಿದ ಘಟನೆ ಪಟನಾದಲ್ಲಿ ಸಂಭವಿಸಿದೆ.

ಸುಪೌಲ್ ಜಿಲ್ಲೆಯ, ಮಾರೀಚ ಬಳಿಯ ಭೇಜಾ-ಬಕೌರ್‌ಗೆ ಅಡ್ಡಲಾಗಿ ಸೇತುವೆ ನಿರ್ಮಿಸಲಾಗುತ್ತಿದ್ದು, ಇಂದು (ಮಾ.22) ಬೆಳಗ್ಗೆ ಸೇತುವೆ ಕುಸಿದಿದೆ. ಈ ವೇಳೆ ಓರ್ವ ಕಾರ್ಮಿಕ ಸಾವನ್ನಪ್ಪಿದ್ದು 30 ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ.

ಘಟನಾ ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ಆಗಮಿಸಿದ್ದು, ಕಾರ್ಯಾಚರಣೆ ಆರಂಭಿಸಿದ್ದಾರೆ. ಸ್ಥಳೀಯರು ಕೂಡ ರಕ್ಷಣಾ ಕಾರ್ಯಾಚರಣೆಯಲ್ಲಿ ನೆರವು ನೀಡುತ್ತಿದ್ದಾರೆ. ನಿರ್ಮಾಣ ಹಂತದ ಕಾಮಗಾರಿ ಕುಸಿದ ಕಾರಣ ಜನ ಆಕ್ರೋಶ ವ್ಯಕ್ತಪಡಿಸಿದ್ದು, ಭ್ರಷ್ಟಾಚಾರದ ಆರೋಪ ಕೂಡ ಮಾಡಿದ್ದಾರೆ.

error: Content is protected !!