ರೀಲ್ಸ್ ರಾಣಿ ಸೋನು ಶ್ರೀನಿವಾಸ್ ಗೌಡ ಅರೆಸ್ಟ್: ಮಕ್ಕಳ ಕಲ್ಯಾಣ ಇಲಾಖೆಯಿಂದ ದೂರು ದಾಖಲು: ಸೋನು ಮಾಡಿದ ಆ ವಿಡಿಯೋಗಳೇ ಬಂಧನಕ್ಕೆ ಕಾರಣ

ಬೆಂಗಳೂರು: ಸೋನು ಶ್ರೀನಿವಾಸ್ ಗೌಡ ಎಲ್ಲರಿಗೂ ಗೊತ್ತಿರುವ ಹೆಸರು. ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ರೀಲ್ಸ್ ವಿಡಿಯೋ ಮಾಡಿಕೊಂಡು, ಅನೇಕ ಬಾರಿ ಫೋಟೊ, ರೀಲ್ಸ್, ವಿಡಿಯೊ ಮೂಲಕ ಟ್ರೋಲ್‌ಗೆ ಗುರಿಯಾಗುತ್ತಲೇ ಇರುವವರು. ಈಗ ಇವರ ವಿರುದ್ಧ ಮಕ್ಕಳ ಕಲ್ಯಾಣ ಇಲಾಖೆಯಿಂದ ದೂರು ದಾಖಲಾಗಿದ್ದು ಸದ್ಯ ಸೋನು ಅರೆಸ್ಟ್ ಆಗಿದ್ದಾರೆ.

ಸೋನುಗೌಡ ಅನಧೀಕೃತವಾಗಿ 8 ವರ್ಷದ ಸೇವಂತಿ ಎನ್ನುವ ಬಡ ಹುಡುಗಿಯನ್ನು ದತ್ತು ಪಡೆದುಕೊಂಡುದ್ದರು. ಈ ಬಗ್ಗೆ ಅನೇಕ ವಿಡಿಯೋ ಮಾಡಿ ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿದ್ದರು. ಆದರೆ ಕಾನೂನು ಪ್ರಕಾರ ದತ್ತು ಪಡೆದ ಮಕ್ಕಳ ವಿಚಾರ ಅಥವ ದತ್ತು ಪಡೆದುಕೊಂಡ ವಿಷಯವನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವಂತಿಲ್ಲ. ಹೀಗಾಗಿ ಮಕ್ಕಳ ಕಲ್ಯಾಣ ಇಲಾಖೆ ಸೋನು ಗೌಡ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ಸೋನು ಅವರನ್ನು ಬಂಧಿಸಿದ್ದಾರೆ. ವಿಚಾರಣೆಗೆ ಒಳಪಡಿಸಿದ್ದಾರೆ.

error: Content is protected !!