ಲಾಯಿಲ: ಬೇಲ್ ಪುರಿ ಸ್ಟಾಲ್ ಮಾಲಕ ರಾಜು ಶೆಟ್ಟಿ ಕನ್ನಾಜೆ ಹೃದಯಾಘಾತದಿಂದ ನಿಧನ!

ಬೆಳ್ತಂಗಡಿ: ಕನ್ನಾಜೆ ನಿವಾಸಿ ಲಾಯಿಲದಲ್ಲಿ ಬೇಲ್ ಪುರಿ ವ್ಯಾಪಾರ ಮಾಡುತ್ತಿದ್ದ ರಾಜು ಶೆಟ್ಟಿ (51) ಯವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಬೆಳಿಗ್ಗೆ 7 ಗಂಟೆ ಸುಮಾರಿಗೆ ಮನೆಯಲ್ಲಿ ಅಸ್ವಸ್ಥಗೊಂಡಾಗ ಮನೆಯವರು ತಕ್ಷಣ ಅವರನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಆದರೆ ಅಷ್ಟೊತ್ತಿಗಾಗಲೇ ಅವರು ಮೃತ ಪಟ್ಟಿದ್ದಾರೆ ಎಂದು ವೈದ್ಯರು ಧೃಢ ಪಡಿಸಿದ್ದಾರೆ.

ಕಳೆದ 15 ವರ್ಷಗಳಿಂದ ಲಾಯಿಲ ಜಂಕ್ಷನ್ ಬಳಿ ಬೆಲ್ ಪುರಿ ಅಂಗಡಿ ನಡೆಸುತಿದ್ದ ಇವರು ಎಲ್ಲರಲ್ಲೂ ಆತ್ಮೀಯತೆಯಿಂದಿದ್ದರು.

ಮೃತರು ಪತ್ನಿ ಮೂವರು ಮಕ್ಕಳು ಬಂಧು ವರ್ಗದವರನ್ನು ಅಗಲಿದ್ದಾರೆ.

error: Content is protected !!