ಮಹಾರಾಷ್ಟ್ರ: 10 ನಿಮಿಷಗಳ ಅಂತರದಲ್ಲಿ ಎರಡು ಭೂಕಂಪ: ಹಲವು ಮನೆಗಳ ಗೋಡೆಗಳಲ್ಲಿ ಬಿರುಕು!

ಮಹಾರಾಷ್ಟ್ರ: ಹಿಂಗೋಲಿ ನಗರದಲ್ಲಿನ ಜನರಿಗೆ ಇಂದು ಮುಂಜಾನೆ ಭೂಕಂಪದ ಅನುಭವವಾಗಿದೆ.

ಮರಾಠವಾಡದ ನಾಂದೇಡ್, ಪರ್ಭಾನಿ, ಹಿಂಗೋಲಿ ಪ್ರದೇಶಗಳಲ್ಲಿ ಇಂದು ಬೆಳಗ್ಗೆ 6.19ರ ಸುಮಾರಿಗೆ ಕೇವಲ 10 ನಿಮಿಷಗಳ ಅಂತರದಲ್ಲಿ 4.5 ಹಾಗೂ 3.6 ತೀವ್ರತೆಯ ಭೂಕಂಪಗಳು ವರದಿಯಾಗಿವೆ. ಇದು 10 ಕಿ.ಮೀ ಆಳದಲ್ಲಿ ಸಂಭವಿದ್ದು ಭಯಭೀತರಾದ ಜನ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ನಾಂದೇಡ್‍ನ ಉತ್ತರ ಭಾಗದಲ್ಲೂ ಭೂಕಂಪನದ ಅನುಭವವಾಗಿದೆ.

ಈ ಭೂಕಂಪದ ಕೇಂದ್ರ ಬಿಂದು ಹಿಂಗೋಲಿ ಜಿಲ್ಲೆಯ ಅಖಾರ ಬಾಲಾಪುರ ಮತ್ತು ಇದರ ತೀವ್ರತೆಯನ್ನು ಹಿಂಗೋಲಿ ಪರ್ಭಾನಿ ನಾಂದೇಡ್ ಜಿಲ್ಲೆಯ ಎಲ್ಲಾ ಮೂರು ಗ್ರಾಮಗಳು ಅನುಭವಿಸಿವೆ. ಭೂಕಂಪದಿಂದ ಯಾವುದೇ ಆಸ್ತಿ-ಪಾಸ್ತಿ ಹಾನಿ ಅಥವಾ ಪ್ರಾಣ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಆದರೆ. ಹಲವು ಮನೆಗಳ ಗೋಡೆಗಳು ಸಣ್ಣದಾಗಿ ಬಿರುಕು ಬಿಟ್ಟಿವೆ ಎಂದು ವರದಿಯಾಗಿದೆ.

error: Content is protected !!