ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ: ಬಾಂಜಾರುಮಲೆಯ ಅರಣ್ಯವಾಸಿ ಜನರೊಂದಿಗೆ ‘ಶಕ್ತಿವಂದನಾ’ ಕಾರ್ಯಕ್ರಮ: ಜಿಲ್ಲಾ ಮಹಿಳಾ ಮೋರ್ಚಾದ ವತಿಯಿಂದ ಆಯೋಜನೆ

ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ಮಹಿಳಾ ಮೋರ್ಚ ಜಿಲ್ಲಾ ಮಹಿಳಾ ಮೋರ್ಚಾದ ವತಿಯಿಂದ ನೆರಿಯ ಗ್ರಾಮಪಂಚಾಯಿತ್ ವ್ಯಾಪ್ತಿಯ ಬಾಂಜಾರುಮಲೆಯಲ್ಲಿನ ಅರಣ್ಯವಾಸಿ ಜನರೊಂದಿಗೆ ಶಕ್ತಿವಂದನಾ ಕಾರ್ಯಕ್ರಮ ನಡೆದಿದೆ.

ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಯೋಜನೆಗಳ ಬಗ್ಗೆ ಅಲ್ಲಿಯ ಜನರಿಗೆ ಮನವರಿಕೆ ಮಾಡಲಾಯಿತು. ಜೊತೆಗೆ ಮಹಿಳೆಯರಿಗೆ ಮನರಂಜನಾತ್ಮಕ ಆಟೋಟ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲಾ ಹಾಗೂ ಬೆಳ್ತಂಗಡಿ ಮಂಡಲದ ಅಧ್ಯಕ್ಷರಾದ ಶ್ರೀನಿವಾಸ್ ರಾವ್ ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಮಂಜುಳಾ ರಾವ್ ಪ್ರಧಾನ ಕಾರ್ಯದರ್ಶಿ ಸಂಧ್ಯಾ ವೆಂಕಟೇಶ್ ಹಾಗೂ ಲಕಿತ, ಪದಾಧಿಕಾರಿಗಳು ಹಾಗೂ ಜಿಲ್ಲಾ ಕಾರ್ಯದರ್ಶಿಗಳಾದ ಸೀತಾರಾಮ್ ಬೆಳಾಲು, ಪ್ರಧಾನ ಕಾರ್ಯದರ್ಶಿ ಜಯಾನಂದ ಗೌಡ, ಪ್ರಶಾಂತ್ ಪಾರೆಂಕಿ, ಬೆಳ್ತಂಗಡಿ ಮಹಿಳಾ ಮೋರ್ಚಾದ ಅಧ್ಯಕ್ಷರಾದ ವಿದ್ಯಾ ಶ್ರೀನಿವಾಸ ಗೌಡ ಬೆಳಾಲು, ಪ್ರಧಾನ ಕಾರ್ಯದರ್ಶಿಗಳಾದ ಪೂರ್ಣಿಮಾಜಯಂತ್, ತುಳಸಿ ಮಾಲಾಡಿ, ಯುವ ಮೊರ್ಚಾದ ಅಧ್ಯಕ್ಷರಾದ ಶಶಿರಾಜ್ ಶೆಟ್ಟಿ ಪದಾಧಿಕಾರಿಗಳು, ಚಾರ್ಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಾರದ ಚಾರ್ಮಾಡಿ, ಮಹಿಳಾ ಮೊರ್ಚದ ಉಪಾಧ್ಯಕ್ಷರಾದ ಶಾರದ ಕಳೆಂಜ ಉಪಸ್ಥಿತರಿದ್ದರು.

error: Content is protected !!