ಸಿನಿಮಾ ಜಗತ್ತಿಗೆ ಬರಸಿಡಿಲಿನಂತೆ ಎರಗಿದ ಅಪಘಾತದ ಸುದ್ದಿ: ಗಾಯಕಿ ಮಂಗ್ಲಿ ಕಾರಿಗೆ ಟ್ರಕ್ ಡಿಕ್ಕಿ!

ಬೆಂಗಳೂರು: ಜನಪ್ರಿಯ ಗಾಯಕಿ ಪ್ರಯಾಣಿಸುತ್ತಿದ್ದ ಕಾರಿಗೆ ಟ್ರಕ್ ಡಿಕ್ಕಿಯಾದ ಘಟನೆ ಮಾ.17ರಂದು ರಾತ್ರಿ ಸಂಭವಿಸಿದೆ.


ರಂಗಾ ರೆಡ್ಡಿ ಜಿಲ್ಲೆಯ ನಂದಿಗ್ರಾಮ ಕನ್ಹಾ ಆಧ್ಯಾತ್ಮಿಕ ಉತ್ಸವದಲ್ಲಿ ಭಾಗವಹಿಸಿ ಮನೆಗೆ ಮರಳುತ್ತಿದ್ದಾಗ ಖ್ಯಾತ ಗಾಯಕಿ ಮಂಗ್ಲಿ ಅವರ ಕಾರಿಗೆ ಸಣ್ಣ ಟ್ರಕ್ ಹಿಂಬದಿಯಿಂದ ಡಿಕ್ಕಿಯಾಗಿದೆ. ಪರಿಣಾಮ ಮಂಗ್ಲಿಗೆ ಸಣ್ಣ ಪುಟ್ಟ ಗಾಯಗಳಾಗಿದೆ.

ಮಂಗ್ಲಿ ಅವರ ಅಪಘಾತದ ಸುದ್ದಿ ಸಿನಿಮಾ ಜಗತ್ತಿಗೆ ಬರಸಿಡಿಲಿನಂತೆ ಎರಗಿದೆ. ಅಪಘಾತದಲ್ಲಿ ಮಂಗ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರಿಂದ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

 

error: Content is protected !!