ಚಾರ್ಮಾಡಿ: ಚಾರ್ಮಾಡಿ ಘಾಟ್ ರಸ್ತೆಯ ತಿರುವಿನಲ್ಲಿ 16 ಚಕ್ರದ ಲಾರಿಯೊಂದು ಜಾಮ್ ಆಗಿ ಉಳಿದ ವಾಹನ ಸವಾರರು ಪರದಾಡಿದ ಘಟನೆ ಇಂದು (ಮಾ.18) ಸಂಭವಿಸಿದೆ.
ಹುಬ್ಬಳ್ಳಿಯಿಂದ ಮಂಗಳೂರಿಗೆ ಸಿಮೆಂಟ್ ಸಾಗಿಸುತ್ತಿದ್ದ 16 ಚಕ್ರದ ಲಾರಿ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯ 10ನೇ ತಿರುವಿನಲ್ಲಿ ಜಾಮ್ ಆಗಿದ್ದು ಲಾರಿಯನ್ನು ಟರ್ನ್ ಮಾಡಲು ಚಾಲಕ ಪರದಾಡಿದ್ದಲ್ಲದೇ ಇತರೆ ಸಣ್ಣ ವಾಹನ ಚಾಲಕರು ಬೆಳಗ್ಗೆಯಿಂದಲೇ ಜಾಮ್ ನಲ್ಲಿ ಸಿಲುಕಿ ಪರದಾಡುವಂತಾಗಿತ್ತು.
ಘಟನೆಯ ಬಗ್ಗೆ ಆಕ್ರೋಶಗೊಂಡ ವಾಹನ ಸವಾರರು, ಸ್ಥಳೀಯರು 6 ಚಕ್ರದ ವಾಹನಕ್ಕಿಂತ ದೊಡ್ಡ ವಾಹನಗಳು ಚಾರ್ಮಾಡಿ ಘಾಟಿಯಲ್ಲಿ ಸಂಚರಿಸುವಂತಿಲ್ಲ ಎಂಬ ನಿಯಮವಿದ್ದರೂ ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ಹೇಗೆ ಲಾರಿಯನ್ನು ಚಾರ್ಮಾಡಿ ರಸ್ತೆಯಲ್ಲಿ ಸಂಚರಿಸಲು ಅವಕಾಶ ನೀಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.