ಬೆಳ್ತಂಗಡಿ : ಕಳಿಯ ಗ್ರಾಮ ಪಂಚಾಯತ್ 15 ನೇ ಹಣಕಾಸು ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನೆಯು ಮಾ.14 ರಂದು ಪಂಚಾಯತ್ ಸಭಾಂಗಣದಲ್ಲಿ ಜರುಗಿತು.
ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಮೆದಿನ ಅಧ್ಯಕ್ಷತೆ ವಹಿಸಿದ್ದರು.
ಕರಾಯ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಟಿ.ಬಿ.ಬಸವ ಲಿಂಗಪ್ಪ ಸಭೆಯನ್ನು ನಡೆಸಿಕೊಟ್ಟರು.
ಕಳಿಯ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಇಂದಿರಾ ಬಿ.ಶೆಟ್ಟಿ,ಅಭಿವೃದ್ಧಿ ಅಧಿಕಾರಿ ಸಂತೋಷ್ ಪಾಟೀಲ್,ಕಾರ್ಯದರ್ಶಿ ಕುಂಜ್ಙ ಕೆ ,ಸಾಮಾಜಿಕ ಲೆಕ್ಕ ಪರಿಶೋಧನಾ ಸಮಿತಿ ಮುಖ್ಯಸ್ಥರಾದ ಜಯಲಕ್ಷ್ಮಿ, ತಾಲೂಕು ಕಿರಿಯ ಅಭಿಯಂತರ ಗಫೂರು,ಚರಣ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಂಚಾಯತ್ ಕಾಮಗಾರಿ ಬಗ್ಗೆ ಲೆಕ್ಕ ಪರಿಶೋಧನೆ ಸಮಿತಿ ಸದಸ್ಯರಿಗೆ ಹಾಗೂ ಪಂಚಾಯತು ಸದಸ್ಯರು, ಗ್ರಾಮಸ್ಥರ ಮಧ್ಯೆ ಮಾತಿನ ಚಕಮಕಿ ನಡೆಯಿತು.
ಈ ಸಂದರ್ಭದಲ್ಲಿ ಪಂಚಾಯತು ಸದಸ್ಯರಾದ ಸುಧಾಕರ ಮಜಲು,ಯಶೋಧರ ಶೆಟ್ಟಿ ಕೆ, ಅಬ್ದುಲ್ ಕರೀಂ ಕೆ.ಎಮ್, ಲತೀಫ್,ಸುಭಾಷಿಣಿ ಜನಾರ್ದನ ಗೌಡ ಕೆ, ಕುಸುಮ ಎನ್.ಬಂಗೇರ,ಮೋಹಿನಿ,ಮರೀಟಾ ಪಿಂಟೊ,ಪುಷ್ಪ ಹಾಗೂ ಗೇರುಕಟ್ಟೆ ಹಾಲು ಉ.ಸಂ.ಅಧ್ಯಕ್ಷ ಜನಾರ್ದನ ಗೌಡ ಕೆ,ಸಹಕಾರ ಭಾರತಿ ಅಧ್ಯಕ್ಷ ರಾಜೇಶ್ ಪೆಂರ್ಬುಡ, ಕಳಿಯ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೇಶವ ಪೂಜಾರಿ,ಗುತ್ತಿಗೆದಾರ ನಿತೇಶ್, ಸ್ಥಳೀಯ ಗ್ರಾಮಸ್ಥರಾದ ರಾಘವ ಹೆಚ್,ಸತೀಶ್ ಭಂಡಾರಿ,ಹಿರಿಯರಾದ ಪೂವಪ್ಪ ಶೆಟ್ಟಿ, ಪಂಚಾಯತ್ ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದರು.