ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವ್ಯವಸ್ಥೆ: ಬೆಳ್ತಂಗಡಿ ವರ್ತಕರ ಸಂಘದಿಂದ ಜನ ಸಂಪರ್ಕ ಸಭೆ: ಹೆದ್ದಾರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಹರೀಶ್ ಪೂಂಜ: ದೂಳು ಏಳದಂತೆ ತಕ್ಷಣ ಕ್ರಮ ಕೈಗೊಳ್ಳಿ ಶಾಸಕರ ಆಗ್ರಹ:

 

 

ಬೆಳ್ತಂಗಡಿ: ಪುಂಜಾಲಕಟ್ಟೆಯಿಂದ ಚಾರ್ಮಾಡಿಯವರೆಗೆ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಅವ್ಯವಸ್ಥೆಯಿಂದ ಕೂಡಿದ್ದು ನಗರದಲ್ಲಿ ಹಾದು ಹೋಗುವ ರಸ್ತೆಗಳ ಬಗ್ಗೆ ವರ್ತಕರ ಹಾಗೂ ಕಟ್ಟಡ ಮಾಲೀಕರ ಗೊಂದಲಗಳಿಗೆ ಪರಿಹಾರ ಕಂಡು ಕೊಳ್ಳಲು ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ವರ್ತಕರ ಸಂಘದ ಬೇಡಿಕೆಯ ಮೇರೆಗೆ ಹೆದ್ದಾರಿ ಅಧಿಕಾರಿಗಳು, ಗುತ್ತಿಗೆದಾರರು, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಜನಸಂಪರ್ಕ ಸಭೆಮಾ 10 ರಂದು ಗುರುವಾಯನಕೆರೆ, ಹಳೇಕೋಟೆ, ಚರ್ಚ್ ರೋಡ್, ಸಂತೆ ಕಟ್ಟೆ, ಬಸ್ ನಿಲ್ದಾಣದಲ್ಲಿ ಬಳಿ ನಡೆಯಿತು. ಈ ವೇಳೆ ಅಸಾಮಾಧಾನ ಹೊರ ಹಾಕಿದ ವರ್ತಕರು ಸೇರಿದಂತೆ ಸಾರ್ವಜನಿಕರು ದೂಳಿನಿಂದಾಗಿ ಸಂಚರಿಸಲು ಕಷ್ಟವಾಗುತ್ತಿದೆ. ಗುತ್ತಿಗೆದಾರರಲ್ಲಿ ನೀರು ಹಾಕುವಂತೆ ಸೂಚಿಸಿದರೂ ಸ್ಪಂದಿಸುತ್ತಿಲ್ಲ ದಯವಿಟ್ಟು ದೂಳಿನಿಂದ ಮುಕ್ತಿ ನೀಡಿ  ಎಂದು ಶಾಸಕರಲ್ಲಿ ಹೇಳಿದಾಗ ಶಾಸಕರು ಅಧಿಕಾರಿಗಳನ್ನು ಸೇರಿದಂತೆ ಗುತ್ತಿಗೆದಾರರನ್ನು  ತರಾಟೆಗೆ ತೆಗೆದುಕೊಂಡರಲ್ಲದೇ ದಿನಂಪ್ರತಿ ಮೂರು ಹೊತ್ತು ದೂಳು ಏಳದಂತೆ ನೀರು ಸಿಂಪಡಿಸಬೇಕು ಜನರ    ಸಮಸ್ಯೆಗೆ ಸ್ಪಂದಿಸಿ ಎಂದರಲ್ಲದೆ ಒಂದು ವೇಳೆ ನೀರು ಹಾಕದಿದ್ದರೆ ನನ್ನ ಗಮನಕ್ಕೆ ತನ್ನಿ ಎಂದು ಸಾರ್ವಜನಿಕರಿಗೆ ತಿಳಿಸಿದರು.

error: Content is protected !!