ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವ್ಯವಸ್ಥೆ ವಿರುದ್ಧ ಅಸಾಮಾಧಾನ ಹೊರ ಹಾಕಿದ ಸಾರ್ವಜನಿಕರು: ಅಭಿವೃದ್ಧಿ ಹೆಸರಲ್ಲಿ ಧೂಳು ತಿನ್ನಿಸಬೇಡಿ: ರಸ್ತೆ ಬದಿಗಳಲ್ಲಿ ಸೂಚನಾ ಫಲಕ ಅಳವಡಿಕೆ:

 

 

 

ಬೆಳ್ತಂಗಡಿ: ಪುಂಜಾಲಕಟ್ಟೆಯಿಂದ ಚಾರ್ಮಾಡಿಯವರೆಗೆ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಅವ್ಯವಸ್ಥೆಯಿಂದ ಕೂಡಿದ್ದು ಈ ಬಗ್ಗೆ ಸಾರ್ವಜನಿಕರು ಕಾಮಗಾರಿ ವಿರುದ್ಧ ಅಸಾಮಾಧಾನ ಹೊರ ಹಾಕಿ ರಸ್ತೆ ಬದಿಯಲ್ಲಿ ಪ್ರತಿಭಟನಾ ರೀತಿಯಲ್ಲಿ  ಸೂಚನಾ ಫಲಕ ಅಳವಡಿಸಿರುವುದು ಎಲ್ಲರ ಗಮನ ಸೆಳೆಯುತ್ತಿದೆ.ಅಭಿವೃದ್ಧಿ ಹೆಸರಲ್ಲಿ ದೂಳು ತಿನ್ನಿಸಬೇಡಿ, ರಸ್ತೆ ಅಗಲೀಕರಣ ಜನಸ್ನೇಹಿಯಾಗಿರಲಿ, ರಸ್ತೆ ಬೇಕು ದೂಳು ಬೇಡ ಎಂಬ ಹಲವಾರು ಫಲಕಗಳು ರಸ್ತೆಯುದ್ದಕ್ಕೂ ಅಳವಡಿಸಲಾಗಿದೆ.

 

ಕಳೆದ ಕೆಲವು ಸಮಯಗಳಿಂದ ನಾಗಪುರ ಮೂಲದ ಗುತ್ತಿಗೆದಾರರು ಹೆದ್ದಾರಿ ಕಾಮಗಾರಿ ನಡೆಸುತಿದ್ದು ತೀರಾ ಅವೈಜ್ಞಾನಿಕ ರೀತಿಯಲ್ಲಿ ನಡೆಯುತ್ತಿದೆ ದೂಳಿನಿಂದಾಗಿ ರಸ್ತೆಯಲ್ಲಿ ಸಂಚಾರ ಮಾಡದಂತಹ ಸ್ಥಿತಿ ನಿರ್ಮಾಣವಾಗಿದೆ. ಚರಂಡಿ ಕಾಮಗಾರಿಗಳು ತೀರಾ ಕಳಪೆ ಗುಣಮಟ್ಟದಲ್ಲಿದ್ದು ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ವಾಹನ ದಟ್ಟಣೆ ಹೆಚ್ಚಾಗಿರುವ ಈ ರಸ್ತೆಯಲ್ಲಿ ದೂಳಿನಿಂದಾಗಿ ದ್ವಿಚಕ್ರ ಸೇರಿದಂತೆ ಇತರ  ವಾಹನ ಸಂಚರಿಸಲು ಹರ ಸಾಹಸ ಪಡುವಂತಾಗಿದೆ ಸಾರ್ವಜನಿಕರು,ವಿದ್ಯಾರ್ಥಿಗಳು ದೂಳಿನಿಂದಾಗಿ ಅನಾರೋಗ್ಯಕ್ಕೊಳಗಾಗುತಿದ್ದಾರೆ ಎಂಬ ಬಗ್ಗೆ ಪ್ರಜಾಪ್ರಕಾಶ ಈ ಮೊದಲು ವಿಸ್ಕ್ರತ ವರದಿಯನ್ನು ಪ್ರಕಟಿಸಿತ್ತು. ಈ ವರದಿಯ ಬೆನ್ನಲ್ಲೇ ರಸ್ತೆಗೆ ನೀರು ಸಿಂಪಡಿಸುವ ಕೆಲಸ ನಡೆದರೂ ಇದೀಗ ಮತ್ತೆ ಗುತ್ತಿಗೆದಾರರು ನಿರ್ಲಕ್ಷ್ಯ ವಹಿಸಿದ್ದಾರೆ. ಅದಲ್ಲದೇ ಕೆಲಸಗಾರರು ಯಾರೂ ಕೂಡ ಇಲ್ಲಿಯವರಿಲ್ಲದೇ ಸ್ಥಳೀಯ ಭಾಷೆ ಕೂಡ ಬಾರದಿರುವುದರಿಂದ ಇನ್ನಷ್ಟು ಸಮಸ್ಯೆಗಳನ್ನು ಸಾರ್ವಜನಿಕರು ಎದುರಿಸುವಂತಾಗಿದೆ. ಸಾರ್ವಜನಿಕರು ಈ ಸಮಸ್ಯೆಗಳನ್ನು ಯಾರಲ್ಲಿ ಹೇಳಿಕೊಳ್ಳುವುದು ಎಂದು ತಿಳಿಯದೇ ಈ ರೀತಿ ರಸ್ತೆ ಬದಿಯಲ್ಲಿ ಫಲಕಗಳನ್ನು ಅಳವಡಿಸಿ ಸಂಬಂಧ ಪಟ್ಟವರ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

error: Content is protected !!