ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಗೊಂದಲ: ಮಾ.10, ಶಾಸಕರ ನೇತೃತ್ವದಲ್ಲಿ ಜನಸಂಪರ್ಕ ಕಾರ್ಯಕ್ರಮ: ವರ್ತಕರ ಹಾಗೂ ಕಟ್ಟಡ ಮಾಲೀಕರ ಗೊಂದಲಗಳಿಗೆ ಪರಿಹಾರ

ಬೆಳ್ತಂಗಡಿ: ಪುಂಜಾಲಕಟ್ಟೆ ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಚಾರದಲ್ಲಿ ಬೆಳ್ತಂಗಡಿ ನಗರದಲ್ಲಿ ಹಾದು ಹೋಗುವ ರಸ್ತೆಗಳ ಬಗ್ಗೆ ವರ್ತಕರ ಹಾಗೂ ಕಟ್ಟಡ ಮಾಲೀಕರ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳಲು ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಮಾ.10ರಂದು ಜನಸಂಪರ್ಕ ಕಾರ್ಯಕ್ರಮ ನಡೆಯಲಿದೆ.

ವರ್ತಕರ ಸಂಘದ ಬೇಡಿಕೆಯ ಮೇರೆಗೆ ಹೆದ್ದಾರಿಯ ಅಧಿಕಾರಿಗಳು, ಗುತ್ತಿಗೆದಾರರು, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಜನಸಂಪರ್ಕ ಕಾರ್ಯಕ್ರಮ ನಡೆಯಲಿದ್ದು ಬೆಳಿಗ್ಗೆ 10:30ಕ್ಕೆ ಗುರುವಾಯನೆಕರೆ ಬಂಟರಭವನ ದಿಂದ ಪ್ರಾರಂಭವಾಗಿ, 10: 45ಕ್ಕೆ ವಾಣಿ ಕಾಲೇಜು ಸಮೀಪ, 11:00 ಗಂಟೆಗೆ ಚರ್ಚ್ ರಸ್ತೆ ಬಳಿ, 11:15ಕ್ಕೆ ಅಯ್ಯಪ್ಪ ಮಂದಿರ ಸಮೀಪ, 11:30ಕ್ಕೆ ಮಾರಿಗುಡಿ ಸಮೀಪ, 11: 45ಕ್ಕೆ ಮೂರುಮಾರ್ಗದ ಬಳಿ, 12:00ಕ್ಕೆ ಬೆಳ್ತಂಗಡಿ ಬಸ್ ನಿಲ್ದಾಣ ಬಳಿ ನಡೆಯಲಿದೆ.

ಸಮಸ್ಯೆ ಹಾಗೂ ಗೊಂದಲ ಇರುವವರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ಬೆಳ್ತಂಗಡಿ ವರ್ತಕರ ಸಂಘದ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ವಿನಂತಿಸಿಕೊಂಡಿದ್ದಾರೆ.

 

error: Content is protected !!