ಹಪ್ಪಳದ ಆಸೆಯಿಂದ ಬಂದ ಮಗು: ಬಿಸಿ ಸಾಂಬಾರು ಪಾತ್ರೆಗೆ ಬಿದ್ದು ಸಾವು

ಬಳ್ಳಾರಿ: ಹಪ್ಪಳ ಬೇಕೆಂದು ಆಸೆ ಪಟ್ಟು ಬಂದ 2 ವರ್ಷದ ಮಗು ಆಕಸ್ಮಿಕವಾಗಿ ಬಿಸಿ ಸಾಂಬಾರು ಪಾತ್ರೆಗೆ ಬಿದ್ದು ಮೃತಪಟ್ಟ ಘಟನೆ ಸಂಡೂರು ತಾಲ್ಲೂಕಿನ ಚೋರನೂರು ಹೋಬಳಿಯ ಎಚ್.ಕೆ.ಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ.

ಮನೆಯ ಕಾರ್ಯಕ್ರಮಕ್ಕೆಂದು ಮಾಡಿದ್ದ ಸಾಂಬಾರು ಪಾತ್ರೆಗೆ ಬಿದ್ದ ಮಗುವನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅದಾಗಲೇ ಮಗು ಉಸಿರು ಚೆಲ್ಲಿತ್ತು.

error: Content is protected !!