ಬಿಜೆಪಿಯಿಂದ ಅಯೋಧ್ಯೆ ರಾಮಮಂದಿರ ದರ್ಶನ ಅಭಿಯಾನ: 1,400 ಮಂದಿ ಯಾತ್ರಿಕರೊಂದಿಗೆ ಅಯೋಧ್ಯೆಗೆ ಹೊರಟ “ಆಸ್ಥಾ’ ರೈಲು: ಲೋಕಸಭಾ ಚುನಾವಣೆ ಬಳಿಕ ಎರಡನೇ ಹಂತದ ಅಯೋಧ್ಯೆ ದರ್ಶನ

ಮಂಗಳೂರು: ಬಿಜೆಪಿ ವತಿಯಿಂದ ಆಯೋಜಿಸಲಾಗಿರುವ ಅಯೋಧ್ಯೆ ರಾಮಮಂದಿರ ದರ್ಶನ ಅಭಿಯಾನದ ಮೊದಲ ಹಂತದ ರೈಲು 1,400 ಮಂದಿ ಯಾತ್ರಿಕರೊಂದಿಗೆ ಮಾ.07ರಂದು ಮಂಗಳೂರಿನಿಂದ ಹೊರಟಿದೆ.

ಬಿಜೆಪಿ ಆಯೋಜಿಸಿರುವ ರಾಮಮಂದಿರ ದರ್ಶನ ಅಭಿಯಾನದ ಅಂಗವಾಗಿ ಆಸಕ್ತ ಭಕ್ತರು 3 ಸಾವಿರ ರೂ. ರೈಲು ಪ್ರಯಾಣದ ವೆಚ್ಚ ಪಾವತಿಸಿ “ಆಸ್ಥಾ’ ಹೆಸರಿನ ವಿಶೇಷ ರೈಲಿನ ಮೂಲಕ ಅಯೋಧ್ಯೆ ಯಾತ್ರೆ ಆರಂಭಿಸಿದ್ದಾರೆ.

ದಕ್ಷಿಣ ಕನ್ನಡದ 640 ಮಂದಿ, ಉಡುಪಿಯ 400 ಮಂದಿ ಪ್ರಯಾಣ ಆರಂಭಿಸಿದ್ದು, ಉಳಿದ ಪ್ರಯಾಣಿಕರು ಉತ್ತರ ಕನ್ನಡ ಜಿಲ್ಲೆಯವರಾಗಿದ್ದಾರೆ. ಮಂಗಳೂರಿನಿಂದ ಬುಧವಾರ ಹೊರಟ ರೈಲು ಮಾ. 9ರಂದು ಅಯೋಧ್ಯೆ ತಲುಪಲಿದೆ. ಮಾ. 10ರಂದು ವಾಪಸ್ ಹೊರಟು ಮಾ.13ರಂದು ಮಂಗಳೂರು ತಲುಪಲಿದೆ.

ಎರಡನೇ ಹಂತದ ಅಯೋಧ್ಯೆ ದರ್ಶನ ಲೋಕಸಭಾ ಚುನಾವಣೆ ಬಳಿಕ ಮುಂದುವರಿಯಲಿದೆ ಎಂದು ತಿಳಿಸಲಾಗಿದೆ.

error: Content is protected !!