ಬೆಳ್ತಂಗಡಿ:ಶ್ರೀ ಕ್ಷೇತ್ರ ಮಹಾಲಿಂಗೇಶ್ವರ ದೇವಸ್ಥಾನ ಓಡೀಲು ಇಲ್ಲಿಗೆ ಮಾತೃಶ್ರೀ ಕಾಶಿ ಶೆಟ್ಟಿ ಮತ್ತು ಮಕ್ಕಳು ನವಶಕ್ತಿ ಗುರುವಾಯನಕೆರೆ ಇವರು ರಾಷ್ಟ್ರೀಯ ಹೆದ್ದಾರಿಯ ಕಿನ್ನಿಗೋಳಿ ಎಂಬಲ್ಲಿ ನೂತನ ಮಹಾದ್ವಾರವನ್ನು ಕೊಡುಗೆಯಾಗಿ ನಿರ್ಮಿಸಿಕೊಡುತಿದ್ದು ಇದರ ಶಿಲಾನ್ಯಾಸ ಕಾರ್ಯಕ್ರಮವು ಫೆ 29 ರಂದು ನಡೆಯಿತು. ಮಾತೃಶ್ರೀ ಕಾಶೀ ಶೆಟ್ಟಿಯವರು ಶಿಲಾನ್ಯಾಸ ನೆರವೇರಿಸಿ ಶುಭ ಹಾರೈಸಿದರು.ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಉಪ್ಪಡ್ಕ ಮಾತನಾಡಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಶಶಿಧರ್ ಶೆಟ್ಟಿ ಅವರ ನೇತೃತ್ವದಲ್ಲಿ ಈ ಬಾರಿ ಓಡೀಲು ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿದ್ದು ಈಗಾಗಲೇ ಕಾಮಗಾರಿಗಳು ನಡೆಯುತ್ತಿದೆ. ಭಕ್ತರ ಅನುಕೂಲಕ್ಕಾಗಿ ಕಿನ್ನಿಗೋಳಿ ರಾಷ್ಟ್ರೀಯ ಹೆದ್ದಾರಿಯ ಸಮೀಪ ಮಹಾದ್ವಾರದ ಅವಶ್ಯಕತೆಯನ್ನು ಮನಗಂಡು ಮಾತೃಶ್ರೀ ಕಾಶಿ ಶೆಟ್ಟಿ ಮತ್ತು ಕುಟುಂಬಸ್ಥರು ಸೇರಿಕೊಂಡು ಆಕರ್ಷಣೀಯ ರೀತಿಯಲ್ಲಿ ದ್ವಾರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಶಶಿಧರ್ ಶೆಟ್ಟಿಯವರ ಕಲ್ಪನೆಯಂತೆ ಈ ಮಹಾದ್ವಾರವು ನಿರ್ಮಾಣಗೊಳ್ಳಲಿದ್ದು ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿದ ಕಾಶೀ ಶೆಟ್ಟಿ ಮತ್ತು ಮನೆಯವರಿಗೆ ಗ್ರಾಮಸ್ಥರ ಪರವಾಗಿ ಅಭಿನಂದನೆಗಳು ಎಂದರು. ಶಿಲಾನ್ಯಾಸ ಕಾರ್ಯಕ್ರಮದಲ್ಲಿ ರಘುರಾಮ್ ಭಟ್ ಮಠ ಇವರು ವೈದಿಕ ಕಾರ್ಯಕ್ರಮ ನೆರವೇರಿಸಿದರು. ಮಾಜಿ ಶಾಸಕ ಪ್ರಭಾಕರ ಬಂಗೇರ, ಉದ್ಯಮಿ ರಾಜೇಶ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ, ಸಂತೋಷ್ ಜೈನ್ ಪಡಂಗಡಿ, ವಸಂತ ಗೌಡ, ಗಂಗಾಧರ್ ಭಟ್ ಕೇವುಡೇಲು, ಚಿದಾನಂದ ಇಡ್ಯಾ, ಶಾಂತ ಬಂಗೇರ, ಅಶ್ವಿನಿ ನಾಯಕ್, ಶ್ರೀಧರ ಪೂಜಾರಿ ವರಕಬೆ, ಆನಂದ ಶೆಟ್ಟಿ ವಾತ್ಸಲ್ಯ, ರಾಕೇಶ್ ರೈ, ಆದರ್ಶ್ ಜೈನ್, ಸಚಿನ್ ಕುರೇಲ್ಯ,ಸಾಯಿ ಶೆಟ್ಟಿ, ಸುಕೇಶ್ ಓಡೀಲು, ವಿಜಯ ಸಾಲ್ಯಾನ್, ವಿಕಾಸ್, ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಎಪ್ರಿಲ್ ತಿಂಗಳಿನಿಂದ ಉದ್ಯಮಿ ಶಶಿಧರ್ ಶೆಟ್ಟಿ ಇವರ ನೇತೃತ್ವದಲ್ಲಿ ವಿಜೃಂಭಣೆಯಿಂದ ಬ್ರಹ್ಮಕಲಶೋತ್ಸವ ನಡೆಯಲಿದ್ದು ಈಗಾಗಲೇ ದೇವಸ್ಥಾನದಲ್ಲಿ ಪುಷ್ಕರಿಣಿ, ನಾಗ ದೇವರ ಕಟ್ಟೆ, ಸಭಾ ಮಂಟಪವು ಸೇರಿದಂತೆ ಹಲವಾರೂ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗುತ್ತಿದೆ.