ವಿದ್ಯುತ್ ಬಳಕೆದಾರರಿಗೆ ಸಿಹಿಸುದ್ಧಿ ನೀಡಿದ ರಾಜ್ಯ ಸರ್ಕಾರ: ಕರೆಂಟ್ ಬಿಲ್ಲ್ ದರ ಇಳಿಕೆ ಏಪ್ರಿಲ್ 1 ರಿಂದ ಜಾರಿ..!

 

 

 

ಬೆಂಗಳೂರು: ವಿದ್ಯುತ್ ಬಳಕೆದಾರರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಬೆಲೆ ಏರಿಕೆ ನಡುವೆಯೇ ವಿದ್ಯುತ್ ದರ ಇಳಿಕೆ ಮಾಡಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ರಾಜ್ಯದ ಗ್ರಾಹಕರಿಗೆ ಶುಭ ಸುದ್ದಿ ನೀಡಿದೆ. ಕೆಇಆರ್​ಸಿ ಪ್ರಸಕ್ತ ಸಾಲಿನ (2024-2025) ವಿದ್ಯುತ್ ದರ ಪರಿಷ್ಕರಣೆ ಮಾಡಿದ್ದು ಗೃಹ ಬಳಕೆ, ವಾಣಿಜ್ಯ, ಕೈಗಾರಿಕೆಗಳು ಉಪಯೋಗಿಸುವ ವಿದ್ಯುತ್​ ದರದಲ್ಲಿ ಗಣನೀಯ ಇಳಿಕೆ ಮಾಡಿ ಆದೇಶ ಹೊರಡಿಸಿದೆ.

100 ಯುನಿಟ್‌ಗಿಂತ ಹೆಚ್ಚು ವಿದ್ಯುತ್ ಬಳಸುವ ಗ್ರಾಹಕರಿಗೆ ಮಾತ್ರ ವಿದ್ಯುತ್ ದರ ಇಳಿಕೆಯ ಪ್ರಯೋಜನ ದೊರೆಯಲಿದೆ. ಗೃಹ ಬಳಕೆಯ 100 ಯೂನಿಟ್‌ಗಿಂತ ಹೆಚ್ಚು ಕರೆಂಟ್ ಬಳಸುವ ಗ್ರಾಹಕರಿಗೆ ಪ್ರತಿ ಯುನಿಟ್​ಗೆ 1 ರೂಪಾಯಿ 10 ಪೈಸೆ ದರ ಕಡಿಮೆ ಮಾಡಲಾಗಿದೆ.ಹೆಚ್​ಟಿ ವಾಣಿಜ್ಯ ಬಳಕೆಯ ವಿದ್ಯುತ್ ಗ್ರಾಹಕರಿಗೆ ಇಂಧನ ಬಳಕೆ ಶುಲ್ಕದಲ್ಲಿ ಪ್ರತಿ ಯುನಿಟ್​ಗೆ 1 ರೂಪಾಯಿ 25 ಪೈಸೆ, ಡಿಮ್ಯಾಂಡ್ ಶುಲ್ಕದಲ್ಲಿ ಪ್ರತಿ ಕೆವಿಎಗೆ 10 ರೂಪಾಯಿಯಷ್ಟು ದರ ಇಳಿಸಲಾಗಿದೆ. ಹಾಗೆಯೇ ಹೆಚ್​ಟಿ ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳಿಗೆ ಪ್ರತಿ ಯುನಿಟ್​ಗೆ ಇಂಧನ ಬಳಕೆ ಶುಲ್ಕದಲ್ಲಿ 40 ಪೈಸೆ, ಡಿಮ್ಯಾಂಡ್ ಶುಲ್ಕದಲ್ಲಿ ಪ್ರತಿ ಕೆವಿಎಗೆ 10 ರೂಪಾಯಿ ಇಳಿಸಲಾಗಿದೆ.

ಈ ದರ ಪರಿಷ್ಕರಣೆಯು ಏಪ್ರಿಲ್ 1ರಿಂದ ರಾಜ್ಯದ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿ ಜಾರಿಗೆ ಬರಲಿದೆ.

error: Content is protected !!