ಬೆಳ್ತಂಗಡಿ:ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್.ಉಜಿರೆ ಸಾರಥ್ಯದಲ್ಲಿ ರೋಟರಿ ಕ್ಲಬ್ , ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘ ಹಾಗೂ ಇನ್ನಿರ ದಾನಿಗಳ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕಿನ ಹಳೇ ಪೇಡೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಸೇವಾ ಯಜ್ಞ ಕಾರ್ಯಕ್ರಮವು ರಾತ್ರಿ ಹಗಲೆನ್ನದೇ ಬಿರುಸಿನಿಂದ ಸಾಗುತ್ತಿದೆ. ಬದುಕು ಕಟ್ಟೋಣ ಬನ್ನಿ ತಂಡದ ಸದಸ್ಯರು ದುರಸ್ತಿ ಕಾರ್ಯಕ್ಕೆ ಮತ್ತಷ್ಟು ವೇಗವನ್ನು ನೀಡುವ ಮೂಲಕ ಶೀಘ್ರದಲ್ಲಿ ಕಾಮಗಾರಿಯನ್ನು ಮುಗಿಸಿ ಹೊಸತನದೊಂದಿಗೆ ಸರ್ಕಾರಿ ಶಾಲೆಯನ್ನು ಅಭಿವೃದ್ಧಿ ಪಡಿಸಿ ಶಾಲಾ ಮಕ್ಕಳಿಗೆ ಬಿಟ್ಟು ಕೊಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ನೂರಾರು ಕಾರ್ಯಕರ್ತರು ರಾತ್ರಿಯೆನ್ನದೇ ಸೇವಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಈಗಾಗಲೇ ಹಂಚು ಜೋಡಿಸುವ ಕೆಲಸ ಮಾಡಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಂಚಾಲಕ ಮೋಹನ್ ಕುಮಾರ್ ಅವರು ಹಗಲು ಹೊತ್ತಿನಲ್ಲಿ ಬೇರೆ ಕೆಲಸದ ನಿಮಿತ್ತ ರಾತ್ರಿ ಹೊತ್ತು ಶಾಲಾ ದುರಸ್ತಿ ಕೆಲಸಕ್ಕೆ ಕಾರ್ಯಕರ್ತರು ಕೈಜೋಡಿಸುತಿದ್ದಾರೆ. ನಾವು ಭರವಸೆ ನೀಡಿದ ಸಮಯಕ್ಜೆ ಸರಿಯಾಗಿ ಶಾಲೆಯನ್ನು ಸಂಪೂರ್ಣ ನವೀಕರಣಗೊಳಿಸಿ ಬಿಟ್ಟು ಕೊಡಲು ಪ್ರಯತ್ನ ಪಡುತಿದ್ದೇವೆ ಎಂದರು.ನಮ್ಮೂರ ಕನ್ನಡ ಶಾಲೆ ನಮ್ಮ ಹೆಮ್ಮೆ ಎಂಬ ಧ್ಯೇಯ ವಾಕ್ಯದಂತೆ ರಾತ್ರಿಯೂ ಶ್ರಮದಾನದ ಮೂಲಕ ಸಮಾಜಕ್ಕೊಂದಿಷ್ಟು ಎಂದು ದುಡಿಯುತ್ತಿರುವ ಮೋಹನ್ ಕುಮಾರ್ ಸಂಚಾಲಕತ್ವ ಬದುಕು ಕಟ್ಟೋಣ ಬನ್ನಿ ತಂಡದ ಸದಸ್ಯರ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.