ಸುರತ್ಕಲ್ ,ನಾಪತ್ತೆಯಾಗಿದ್ದ ನಾಲ್ವರು ವಿದ್ಯಾರ್ಥಿಗಳ ಶವ ನದಿಯಲ್ಲಿ ಪತ್ತೆ:

 

 

ಮಂಗಳೂರು : ಸುರತ್ಕಲ್ ವಿದ್ಯಾದಾಯಿನಿ ಫ್ರೌಢ ಶಾಲೆಯಿಂದ  ಫೆ 27 ಮಧ್ಯಾಹ್ನ ನಾಪತ್ತೆಯಾಗಿದ್ದ ನಾಲ್ವರು ವಿದ್ಯಾರ್ಥಿಗಳ ಮೃತದೇಹ   ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆಯಂಗಡಿ ಕೊಪ್ಪಳ ರೈಲ್ವೇ ಸೇತುವೆಯ ಕೆಳಭಾಗದ ನಂದಿನಿ ನದಿಯಲ್ಲಿ  ಪತ್ತೆಯಾಗಿದೆ.

ಸುರತ್ಕಲ್ ವಿದ್ಯಾದಾಯಿನಿ ಪ್ರೌಢ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿಗಳಾದ ಯಕ್ಷಿತ್ ಚಂದ್ರಕಾಂತ್, ನಿರುಪ್, ಅನ್ವಿತ್, ರಾಘವೇಂದ್ರ ಮಂಗಳವಾರ ಮಧ್ಯಾಹ್ನ ಶಾಲೆಯಲ್ಲಿ ಪೂರ್ವ ಸಿದ್ಧತಾ ಪರೀಕ್ಷೆ ಬರೆದ ಬಳಿಕ ಏಕಾಏಕಿ ನಾಪತ್ತೆಯಾಗಿದ್ದರು. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.  ಪೊಲೀಸರು ಶಾಲೆ ಹಾಗೂ ಸುತ್ತಮುತ್ತ ಸಿಸಿ ಕ್ಯಾಮಾರ ಪರಿಶೀಲನೆ ನಡೆಸಿದಾಗ ಹಳೆಯಂಗಡಿಯಲ್ಲಿ ಬಸ್ಸಿನಿಂದ ಇಳಿದು ಹೋಗಿರುವ ಮಾಹಿತಿ ಲಭ್ಯವಾಗಿದೆ.ಅದಲ್ಲದೇ ವಿದ್ಯಾರ್ಥಿಯೊಬ್ಬನ ಬಳಿ ಇದ್ದ ಮೊಬೈಲ್ ಟವರ್ ಲೊಕೇಷನ್ ಆಧರಿಸಿ ವಿದ್ಯಾರ್ಥಿಗಳು ನದಿಯ ದಡಕ್ಕೆಬಂದಿರುವುದು ಖಚಿತ ಪಡಿಸಿಕೊಂಡು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ನದಿಯ ದಡದಲ್ಲಿ ಶಾಲಾ ಬ್ಯಾಗ್ ಚಪ್ಪಲಿ ಸಮವಸ್ತ್ರ ಪತ್ತೆಯಾಗಿದೆ.‌ತಕ್ಷಣ ಸ್ಥಳೀಯರ ಸಹಕಾರದಿಂದ ನದಿಯಲ್ಲಿ ಹುಡುಕಾಡಿದಾಗ ನಾಲ್ಕು ಮಕ್ಕಳ ಮೃತ ದೇಹ ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.

ಮಕ್ಕಳ ಶವವನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಮಂಗಳೂರು ಪೊಲೀಸ್‌ ವರಿಷ್ಠಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ನಡೆಸುತ್ತಿದ್ದಾರೆ.

error: Content is protected !!