ಮಂಗಳೂರು: ಭಾರತೀಯ ಜಲ ಪ್ರದೇಶವಾದ ಕುಮಟಾ ಬಳಿಯ ಆಳ ಸಮುದ್ರದಲ್ಲಿ ಚೀನಾ ಬೋಟ್ ಪತ್ತೆಯಾಗಿದ್ದು, ಕರಾವಳಿ ಕಾವಲು ಪಡೆಯ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.
ಚೀನಾದ ಫುಝುವಾ ಬಂದರಿನಲ್ಲಿ ನೋಂದಣಿಯಾಗಿರುವ ಬೋಟ್ ಇದಾಗಿದ್ದು, ರಾಜ್ಯದ ಕರಾವಳಿಯ ಮೀನುಗಾರರು ಚೀನಾ ಬೋಟ್ ನ ವಿಡಿಯೋ ಸೆರೆಹಿಡಿದ್ದಾರೆ. ಭಾರತೀಯ ಸೇನೆ ಕಣ್ಣು ತಪ್ಪಿಸಿ ಚೀನಾ ಬೋಟ್ ಗಡಿ ಪ್ರವೇಶ ಮಾಡಿದ್ದು, ಗೂಢಚರ್ಯೆ ನಡೆಸುತ್ತಿರುವ ಅನುಮಾನ ವ್ಯಕ್ತವಾಗಿದೆ.
ಕರಾವಳಿ ಪೊಲೀಸ್ ಪಡೆಯ ಕುಮಟಾ ಠಾಣೆ ಇನ್ಸ್ ಪೆಕ್ಟರ್ ವಿಕ್ಟರ್ ನೈಮನ್ ತನಿಖೆ ಕೈಗೊಂಡಿದ್ದು ಈ ತಂಡ ಮೀನುಗಾರರಿಂದ ಮಾಹಿತಿ ಕಲೆ ಹಾಕುತ್ತಿದೆ.