ಬೆಂಗಳೂರು: ‘ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯ ಅಲ್ಲ’ ಎಂಬ ಸುತ್ತೋಲೆ ರಾಜ್ಯದಲ್ಲಿ ಚರ್ಚೆಗೆ ಕಾರಣವಾಗಿತ್ತು. ಆದರೆ ಇದು ಪ್ರಿಂಟ್ ಮಿಸ್ಟೇಕ್ ಆಗಿದ್ದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರು ಸ್ಪಷ್ಟನೆ ನೀಡಿದ್ದಾರೆ.
ಸರ್ಕಾರಿ ಶಾಲೆಗಳಿಗೆ ನಾಡಗೀತೆ ಆದೇಶ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು “ಒಂದು ಸಣ್ಣ ಪ್ರಿಂಟ್ ಸಮಸ್ಯೆ ಆಗಿದೆ. ನೋಟ್ ಶೀಟ್‌ನಲ್ಲಿ ಎಲ್ಲ ಶಾಲೆಗಳು ಎಂದಿದೆ. ಅದು ಮುದ್ರಣ ತಪ್ಪಿನಿಂದ ಆಗಿದೆ. ಅದನ್ನು ಸರಿಪಡಿಸಿ, ಮರು ಆದೇಶ ಹೊರಡಿಸಲಾಗುವುದು. ನಮಗೆ ಎಲ್ಲ ಶಾಲೆಗಳು ಒಂದೇ. ಆದೇಶ ಮಾಡಬೇಕಾದರೆ ಸರ್ಕಾರಿ ಶಾಲೆ, ಅನುದಾನಿತ ಶಾಲೆ ಅಂತಾ ಹಾಕಿದ್ದಾರೆ. ತಿದ್ದುಪಡಿ ಆದೇಶದಲ್ಲಿ ಎಲ್ಲ ಶಾಲೆಗಳಲ್ಲಿ ಕಡ್ಡಾಯ ನಾಡಗೀತೆ ಅಂತಾ ಹಾಕಿಸುತ್ತೇವೆ. ಸಂಜೆಯೊಳಗೆ ತಿದ್ದುಪಡಿ ಮಾಡಿ ಮರು ಆದೇಶ ಹೊರಡಿಸುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.