ಪ್ರಗತಿಪರ ಕೃಷಿಕ, ಸಾಧಕ, ಹಿರಿಯ ಕಂಬಳ ಓಟಗಾರ ಲೋಕಯ್ಯ ಗೌಡ ನಿಧನ

ಬೆಳ್ತಂಗಡಿ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ನಡೆಯುತ್ತಿದ್ದ ಹಲವಾರು ಕಂಬಳಗಳಲ್ಲಿ ಅಡ್ಡ ಹಲಗೆ ವಿಭಾಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಲೋಕಯ್ಯ ಗೌಡ ಅವರು ತಮ್ಮ 70ನೇ ವಯಸ್ಸಿಗೆ ವಿಧಿವಶರಾಗಿದ್ದಾರೆ.

ಪ್ರಗತಿಪರ ಕೃಷಿಕರಾಗಿದ್ದ ಇವರು ಹಿರಿಯ ಕಂಬಳ ಓಟಗಾರರೂ ಹೌದು. ಇವರು ಓಡಿಸಿದ ಕೋಣ ಹಲವಾರು ಬಾರಿ ಪ್ರಥಮ ಸ್ಥಾನ ಪಡೆದಿದೆ. ಕಂಬಳ ಕ್ಷೇತ್ರದಲ್ಲಿ ಇವರಿಗಿದ್ದ ಸಾವಿರಾರು ಅಭಿಮಾನಿ ಬಳಗ ಇವರ ಅಗಲಿಕೆಗೆ ನೊಂದಿದೆ.

ಜಿಲ್ಲೆಯಾದ್ಯಂತ ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನಿಸಲ್ಪಟ್ಟಿದ್ದ ಇವರು, ಪುರುಷ ಬಳಗವನ್ನು ಸ್ಥಾಪಿಸಿ , ಅದರ ಸ್ಥಾಪಕಧ್ಯಕ್ಷರಾಗಿ , ಇತ್ತೀಚಿನ ತನಕವೂ ತಂಡವನ್ನು ಮುನ್ನಡೆಸಿದ್ದರು. ಗ್ರಾಮದ ವಿವಿಧ ಸಂಘ- ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ದುಡಿದು ಅತ್ಯಂತ ಸೌಮ್ಯ ಸ್ವಭಾವದಿಂದ ಗುರುತಿಸಿಕೊಂಡಿದ್ದರು.

ಮೃತರು ಪತ್ನಿ ಲಕ್ಷ್ಮೀ , ಗಂಡು ಮಕ್ಕಳಾದ ನಾರಾಯಣ , ಸುರೇಶ್ , ಮುರಳೀಧರ್, ಹೆಣ್ಣು ಮಗಳಾದ ಸುಜಾತ ಸೇರಿದಂತೆ ಕುಟುಂಬಸ್ಥರನ್ನು, ಅಭಿಮಾನಿ ಬಳಗವನ್ನು ಅಗಲಿದ್ದಾರೆ.

error: Content is protected !!