ಬೆಳ್ತಂಗಡಿ: ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಸುವರ್ಣ ಆರ್ಕೇಡ್ ಬೆಳ್ತಂಗಡಿ ವತಿಯಿಂದ ಸುವರ್ಣ ರಂಗ ಸಮ್ಮಾನ್ 2024, ಸಾಧನಾ ಭೂಷಣ 2024 ಕಾರ್ಯಕ್ರಮ ಫೆ.20ರಂದು ರಾತ್ರಿ ಸುವರ್ಣ ಆರ್ಕೆಡ್ ವಠಾರದಲ್ಲಿ ನಡೆಯಿತು.
ಯಕ್ಷಗಾನ ಭಾಗವತರಾದ ಕಾವ್ಯಶ್ರೀ ಅಜೇರು, ದೈವ ನರ್ತಕರು ಮತ್ತು ಸಿವಿಲ್ ಇಂಜಿನಿಯರ್ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ರವೀಶ್ ಪಡುಮಲೆ ಮತ್ತು ಕಲಾ ಪೋಷಕರು ಮತ್ತು ಸಾಂಸ್ಕೃತಿಕ ಸಂಘಟಕರಾದ ಭುಜಬಲಿ.ಬಿ ಇವರಿಗೆ ಸುವರ್ಣ ರಂಗ ಸಮ್ಮಾನ್ 2024 ಪ್ರಶಸ್ತಿಯನ್ನು ಹಾಗೂ ಬದುಕು ಕಟ್ಟೋಣ ಬನ್ನಿ ತಂಡ ಉಜಿರೆ ಇದರ ಸಂಚಾಲಕರಾದ ಮೋಹನ್ ಕುಮಾರ್ ಹಾಗೂ ಸಾಮಾಜಿಕ ಸೇವಾಸಕ್ತರಾದ ಗುರುದತ್ ಪ್ರಭು ಇವರಿಗೆ ಗಣ್ಯರ ಸಮ್ಮುಖದಲ್ಲಿ ಸುವರ್ಣ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪತ್ರಕರ್ತ ಲಕ್ಷ್ಮೀ ಮಚ್ಚಿನ ನಿರೂಪಣೆಯೊಂದಿಗೆ ಭಾಗವತರಾದ ರವಿಚಂದ್ರ ಕನ್ನಡಿಕಟ್ಟೆ ಹಾಗೂ ಕಾವ್ಯಶ್ರೀ ಅಜೇರು ಇವರಿಂದ ಯಕ್ಷ-ಗಾನ-ವೈಭವ ನಡೆದು ಬಳಿಕ 14 ನೇ ವರ್ಷದ ಸಾಂಸ್ಕೃತಿಕ ವೈಭವದ ಪ್ರಯುಕ್ತ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದೆರ್, ಮಂಜೇಶ್ವರ ಅಭಿನಯದ ‘ಕಲಿಯುಗದ ಮಾಯ್ಕಾರೆ ಪಂಜುರ್ಲಿ’ ತುಳು ಪೌರಾಣಿಕ ಮತ್ತು ಸಾಮಾಜಿಕ ಭಕ್ತಿಪ್ರಧಾನ ನಾಟಕ ಪ್ರದರ್ಶನಗೊಂಡಿತು.
ಕಾರ್ಯಕ್ರಮದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಕಲಾಭಿಮಾನಿಗಳು ಸೇರಿದ್ದರು. ಪ್ರಜ್ಞಾ ಓಡಿಲ್ನಾಳ ಕಾರ್ಯಕ್ರಮ ನಿರೂಪಿಸಿದರು.