ಬೆಳ್ತಂಗಡಿ:ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಲಾಯಿಲ ಇದರ ಅಭಿವೃದ್ಧಿ ಬಗ್ಗೆ ಮನವಿಯನ್ನು ಉಜಿರೆಯ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕರಾದ ಮೋಹನ್ ಕುಮಾರ್ ಅವರಿಗೆ ನೀಡಲಾಯಿತು.ಈ ವೇಳೆ ಮಾತನಾಡಿದ ಅವರು ಶಾಲೆ ಗ್ರಾಮದ ಕಣ್ಣು ಇದ್ದ ಹಾಗೆ ಅದನ್ನು ಉಳಿಸಿ ಬೆಳೆಸುವುದು ಗ್ರಾಮಸ್ಥರ ಜವಾಬ್ದಾರಿಯಾಗಿದೆ.ಶಾಲೆ ಪ್ರಾರಂಭಿಸಿದಾಗ ಹಿರಿಯರು ಕಟ್ಟಿದ ಕನಸ್ಸು ನನಸಾಗಿಸುವಲ್ಲಿ ನಾವೆಲ್ಲರೂ ಪ್ರಯತ್ನಪಡಬೇಕಾಗಿದೆ. ಅದ್ದರಿಂದ ಊರವರ ಸಹಕಾರವಿದ್ದರೆ ಮಾದರಿ ಶಾಲೆಯನ್ನಾಗಿ ನಿರ್ಮಿಸುವಲ್ಲಿ ಬದುಕು ಕಟ್ಟೋಣ ಬನ್ನಿ ತಂಡ ಸದಾ ಕೈಜೋಡಿಸಲಿದೆ ಎಂದರು. ಇನ್ನೆರಡು ವರ್ಷಗಳಲ್ಲಿ ಶಾಲೆ 75 ವರ್ಷಗಳನ್ನು ಪೊರೈಸಲಿದೆ ಇದರ ಸವಿನೆನಪಿಗಾಗಿ ಶಾಶ್ವತ ಯೋಜನೆಗಳನ್ನು ಹಮ್ಮಿಕೊಂಡಿರುವ ಬಗ್ಗೆ ಮೋಹನ್ ಕುಮಾರ್ ಅವರಲ್ಲಿ ಶಾಲಾಭಿವೃದ್ಧಿ ಸಮಿತಿ ಹಾಗೂ ಹಳೇ ವಿದ್ಯಾರ್ಥಿ ಸಂಘದವರು ಮಾಹಿತಿಗಳನ್ನು ನೀಡಿದರು ಮುಂದಿನ ದಿನಗಳಲ್ಲಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯ ಪ್ರಸಾದ್ ಶೆಟ್ಟಿ ಎಣಿಂಜೆ, ಎಸ್ ಡಿ. ಎಂ ಸಿ ಅಧ್ಯಕ್ಷ ಸೂರಪ್ಪ ಪಡ್ಲಾಡಿ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಜಯಂತಿ ಆರಾದ್ಯ, ಮುಖ್ಯೋಪಾಧ್ಯಾಯಿನಿ ರಾಜೇಶ್ವರಿ ಹಿರಿಯರಾದ ನಿರಂಜನ್ ಜೈನ್ ಪುದ್ದೊಟ್ಟು, ಸುಬೋದ್ ಜೈನ್, ಅನಿಲ್ ವಿಕ್ರಂ ಡಿಸೋಜ,ಶೇಖರ್ ಎಲ್ , ಸೌಮ್ಯ ಪುದ್ದೊಟ್ಟು, ಪ್ರಣಮ್ಯ ಯೋಗೀಶ್ ಪೆರ್ಲ, ಲೀಲಾವತಿ ಕುಂಡಡ್ಕ, ಹರೀಶ್ ನೆನಪು, ಸತೀಶ್ ಸಪ್ತಗಿರಿ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.