ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಛ ವರ್ಗಾವಣೆ ರದ್ದು: ಮತ್ತೆ ಉಜಿರೆ ಗ್ರಾ.ಪಂ ಪಿಡಿಒ ಆಗಿ ಮುಂದುವರಿಕೆ:

 

 

ಬೆಳ್ತಂಗಡಿ: ತೀರ್ಥ ಹಳ್ಳಿಯ ಆಗುಂಬೆ ಪಂಚಾಯತ್ ಗೆ ವರ್ಗಾವಣೆಗೊಂಡಿದ್ದ ಉಜಿರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಛ ಅವರ ವರ್ಗಾವಣೆ ಆದೇಶ ಮತ್ತೆ ರದ್ದುಗೊಂಡಿದೆ. ಕಳೆದ ಕೆಲವು ಸಮಯಗಳ ಹಿಂದೆ ತೀರ್ಥ ಹಳ್ಳಿ ಸಮೀಪದ ಆಗುಂಬೆಗೆ ವರ್ಗಾವಣೆ ಆದೇಶ ಸರ್ಕಾರದಿಂದ ಬಂದಿದ್ದು ಇದರ ವಿರುದ್ಧ ರದ್ದು ಕೋರಿ ಸಲ್ಲಿಸಿದ ಅರ್ಜಿ ಪುರಸ್ಕಾರ ಗೊಂಡು ಮತ್ತೆ ವರ್ಗಾವಣೆ ರದ್ದಾಗಿ ಉಜಿರೆ ಗ್ರಾಮ ಪಂಚಾಯತ್ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಮುಂದುವರಿಯಲು ಆದೇಶ ಬಂದಿದೆ. ಕಳೆದ ಕೆಲವು ಸಮಯಗಳಿಂದ  ಪ್ರಕಾಶ್ ಶೆಟ್ಟಿ ನೊಚ್ಛ ಅವರನ್ನು ಬೆಳ್ತಂಗಡಿ ತಾಲೂಕಿನಿಂದ ಬೇರೆ ಸ್ಥಳಕ್ಕೆ ವರ್ಗ ಮಾಡಬೇಕು ಎಂದು ಸರ್ಕಾರಕ್ಕೆ ತೆರೆ ಮರೆಯ ಹಿಂದೆ ಬೆಳ್ತಂಗಡಿಯ ಕೆಲವರು ಒತ್ತಡ ತಂದಿದ್ದು. ಅದರಂತೆ ಸುಳ್ಯ ತಾಲೂಕಿನ ಗ್ರಾಮ ಪಂಚಾಯತ್ ಗೆ ವರ್ಗಾವಣೆ ಆದೇಶ ಬಂದಿತ್ತು. ಅದರೆ ನಂತರ ಅದೇಶ ರದ್ದು ಗೊಂಡು ಉಜಿರೆಯಲ್ಲಿ ಪಿಡಿಒ ಆಗಿ ಕರ್ತವ್ಯ ನಿರ್ವಹಿಸುತಿದ್ದರು. ಅದರೆ ಮತ್ತೆ ತೀರ್ಥಹಳ್ಳಿಯ ಆಗುಂಬೆಗೆ ವರ್ಗಾವಣೆಗೊಳಿಸಿ ಆದೇಶ ಬಂದಿದ್ದು ಇದೀಗ ಮತ್ತೆ ವರ್ಗಾವಣೆ ಆದೇಶ ರದ್ದುಗೊಂಡಿರುವುದು ಕೆಲವರಿಗೆ ಇರಿಸು ಮುರಿಸು ಉಂಟಾಗಿದೆ ಎಂದು ತಿಳಿದು ಬಂದಿದೆ.

error: Content is protected !!