ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಬೆಳ್ತಂಗಡಿ: ಸುವರ್ಣ ರಂಗ ಸಮ್ಮಾನ್ , ಸಾಧನಾ ಭೂಷಣ 2024 ಕಾರ್ಯಕ್ರಮ: ‘ಕಲಿಯುಗದ ಮಾಯ್ಕಾರೆ ಪಂಜುರ್ಲಿ’ ತುಳು ನಾಟಕ ಪ್ರದರ್ಶನ

 

 

 

ಬೆಳ್ತಂಗಡಿ: ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಸುವರ್ಣ ಆರ್ಕೇಡ್ ಬೆಳ್ತಂಗಡಿ ಅರ್ಪಿಸುವ ಸುವರ್ಣ ರಂಗ ಸಮ್ಮಾನ್ 2024, ಸಾಧನಾ ಭೂಷಣ 2024 ಕಾರ್ಯಕ್ರಮ ಫೆ.20ರಂದು ಸಂಜೆ 7 ಗಂಟೆಗೆ ಸುವರ್ಣ ಆರ್ಕೆಡ್ ಬೆಳ್ತಂಗಡಿಯಲ್ಲಿ ನಡೆಯಲಿದೆ ಎಂದು ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಸಂಪತ್ ಸುವರ್ಣ ತಿಳಿಸಿದರು.
ಅವರು ಫೆ.19ರಂದು ಬೆಳ್ತಂಗಡಿ ಸುವರ್ಣ ಆರ್ಕೆಡ್ ನ ಸಪ್ತವರ್ಣ ಪಾರ್ಟಿ ಹಾಲ್ ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.
ಯಕ್ಷಗಾನ ಭಾಗವತರಾದ ಕಾವ್ಯಶ್ರೀ ಅಜೇರು, ದೈವ ನರ್ತಕರು ಮತ್ತು ಸಿವಿಲ್ ಇಂಜಿನಿಯರ್ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ರವೀಶ್ ಪಡುಮಲೆ ಮತ್ತು ಕಲಾ ಪೋಷಕರು ಮತ್ತು ಸಾಂಸ್ಕೃತಿಕ ಸಂಘಟಕರಾದ ಭುಜಬಲಿ ಬಿ ಇವರಿಗೆ ಸುವರ್ಣ ರಂಗ ಸಮ್ಮಾನ್ 2024 ಪ್ರಶಸ್ತಿ ನೀಡಲಾಗುವುದು ಎಂದರು.
ಸುವರ್ಣ ಸಾಧನಾ ಭೂಷಣ 2024 ಪ್ರಶಸ್ತಿಗೆ ಬದುಕು ಕಟ್ಟೋಣ ಬನ್ನಿ ತಂಡ ಉಜಿರೆ ಇದರ ಸಂಚಾಲಕರಾದ ಮೋಹನ್ ಕುಮಾರ್ ಹಾಗೂ ಸಾಮಾಜಿಕ ಸೇವಾಸಕ್ತರಾದ ಗುರುದತ್ ಪ್ರಭು ಭಾಜನರಾಗಿದ್ದಾರೆ ಎಂದು ತಿಳಿಸಿದರು.
ಸಂಜೆ 7 ಗಂಟೆಯಿAದ ಭಾಗವತರಾದ ರವಿಚಂದ್ರ ಕನ್ನಡಿಕಟ್ಟೆ ಹಾಗೂ ಕಾವ್ಯಶ್ರೀ ಅಜೇರು ಇವರಿಂದ ಯಕ್ಷ-ಗಾನ-ವೈಭವ ಬಳಿಕ 14 ನೇ ವರ್ಷದ ಸಾಂಸ್ಕೃತಿಕ ವೈಭವದ ಪ್ರಯುಕ್ತ ಶಾರದಾ ಆಟ್ಸ್ ð ತಂಡದ ಐಸಿರಿ ಕಲಾವಿದೆರ್, ಮಂಜೇಶ್ವರ ಅಭಿನಯಿಸುವ ‘ಕಲಿಯುಗದ ಮಾಯ್ಕಾರೆ ಪಂಜುರ್ಲಿ’ ತುಳು ಪೌರಾಣಿಕ ಮತ್ತು ಸಾಮಾಜಿಕ ಭಕ್ತಿಪ್ರಧಾನ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು .

error: Content is protected !!