75ನೇ ವರ್ಷದ ಸಂಭ್ರಮಾಚರಣೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಬಳಂಜ: ಫೆ.18ರಂದು ಶಾರದಾ ಕಲಾ ಮಂದಿರದಲ್ಲಿ ಚಿಂತನಾ ಕಾರ್ಯಗಾರ

ಬೆಳ್ತಂಗಡಿ : ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಹಾಗೂ ಪ್ರೌಢಶಾಲೆ ಬಳಂಜ, ಬಳಂಜ ಶಾಲಾ ಅಮೃತಮಹೋತ್ಸವ ಸಮಿತಿ, ಶಾಲಾಭಿವೃದ್ಧಿ ಸಮಿತಿ ಬಳಂಜ ಶಿಕ್ಷಣ ಟ್ರಸ್ಟ್ (ರಿ.) ಬಳಂಜ, ಹಳೇ ವಿದ್ಯಾರ್ಥಿ ಸಂಘ ಬಳಂಜ ಇದರ ವತಿಯಿಂದ ಬಳಂಜ ಶಾಲಾ 75ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಚಿಂತನಾ ಕಾರ್ಯಗಾರ ಫೆ.18ರಂದು ಬೆಳಿಗ್ಗೆ 10ಗಂಟೆಗೆ ಶಾರದಾ ಕಲಾ ಮಂದಿರ ಬಳಂಜ ಇಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ಬದುಕು ಕಟ್ಟೋಣ ಬನ್ನಿ ತಂಡ ಉಜಿರೆ ಇದರ ಸಂಚಾಲಕ ಮೋಹನ್ ಕುಮಾರ್ ಉದ್ಘಾಟಿಸಲಿದ್ದು ಅಮೃತಮಹೋತ್ಸವ ಸಮಿತಿ ಗೌರವ ಮಾರ್ಗದರ್ಶಕ ಹೆಚ್. ಧರ್ಣಪ್ಪ ಪೂಜಾರಿ ಟ್ರಸ್ಟ್ ನ ಲೋಗೋ ಅನಾವರಣಗೊಳಿಸಲಿದ್ದಾರೆ. ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಅನಂತ್ ಭಟ್ ಮಚ್ಚಿಮಲೆ ನೀಲಿನಕ್ಷೆ ಅನಾವರಣಗೊಳಿಸಲಿದ್ದು, ಅಮೃತ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಕೆ. ವಸಂತ ಸಾಲಿಯಾನ್ ಅಧ್ಯಕ್ಷತೆ ವಹಿಸಲಿದ್ದಾರೆ. ರಾಷ್ಟ್ರೀಯ ತರಬೇತುದಾರ ರಾಮಚಂದ್ರ ಭಟ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದು ಬಳಂಜ ಗ್ರಾ.ಪಂ ಅಧ್ಯಕ್ಷೆ ಶೋಭ ಕುಲಾಲ್ , ತಾಲೂಕು ಪತ್ರಕರ್ತರ ಸಂಘ(ರಿ) ಬೆಳ್ತಂಗಡಿ ಇದರ ಅಧ್ಯಕ್ಷ ಚೈತ್ರೇಶ್ ಇಳಂತಿಲ ಗೌರವ ಉಪಸ್ಥಿತರಿರಲಿದ್ದಾರೆ.

ಅಮೃತ ಮಹೋತ್ಸವ ಸಮಿತಿ ಬಳಂಜ ಇದರ ಅಧ್ಯಕ್ಷ ಪಿ.ಕೆ ಚಂದ್ರಶೇಖರ್, ಶಾಲಾಭಿವೃದ್ಧಿ ಸಮಿತಿ ಬಳಂಜ ಇದರ ಅಧ್ಯಕ್ಷ ರತ್ನಾಕರ ಪೂಜಾರಿ, ಬಳಂಜ ಶಿಕ್ಷಣ ಟ್ರಸ್ಟ್ (ರಿ) ಅಧ್ಯಕ್ಷ ಮನೋಹರ್ ಬಳಂಜ, ಹಳೆ ವಿದ್ಯಾರ್ಥಿ ಸಂಘ ಬಳಂಜ ಇದರ ಅಧ್ಯಕ್ಷ ಸಂತೋಷ್ ಪಿ. ಕೋಟ್ಯಾನ್, ಸ.ಪ್ರೌ.ಶಾಲೆ ಬಳಂಜ ಇಲ್ಲಿನ ಮುಖ್ಯೋಪಾದ್ಯಾಯಿನಿ ಸುಲೋಚನಾ, ಸ.ಉ.ಹಿ.ಪ್ರಾ ಶಾಲೆ ಬಳಂಜ ಇದರ ಮುಖ್ಯೋಪಾಧ್ಯಾಯಿನಿ ರೆನಿಲ್ಡಾ ಜೋಸ್ ಮಥಾಯಸ್, ಹಾಗೂ ಪೋಷಕರು, ವಿದ್ಯಾರ್ಥಿಗಳು, ಮೊದಲಾದವರು ಉಪಸ್ಥಿತರಿರಲಿದ್ದಾರೆ.

error: Content is protected !!