ನಾಟಿ ವೈದ್ಯ ಪೆರಿಂದಿಲೆ ಬೋಜ ಶೆಟ್ಟಿ ಹೃದಯಾಘಾತದಿಂದ ನಿಧನ:

 

ಬೆಳ್ತಂಗಡಿ: ನಾಟಿ ವೈದ್ಯ  ಲಾಯಿಲ ಗ್ರ್ರಾಮದ ಪೆರಿಂದಿಲೆ ಭೋಜ ಶೆಟ್ಟಿ ಹೃದಯಾಘಾತದಿಂದ ಫೆ 16ರಂದು ಮಧ್ಯಾಹ್ನ ಸಾವನ್ನಪ್ಪಿದ್ದಾರೆ.
ಶುಕ್ರವಾರ ಮಧ್ಯಾಹ್ನ ಎದೆ ನೋವು ಕಾಣಿಸಿಕೊಂಡು ಉಸಿರಾಟದ ಸಮಸ್ಯೆ ಉಂಟಾಗಿದ್ದು ತಕ್ಷಣ ಅವರನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ಕೊಂಡು ಹೋದಾಗ ಅಲ್ಲಿ ಅವರನ್ನು ವೈದ್ಯರು ಪರೀಕ್ಷಿಸಿ ಮೃತರಾಗಿದ್ದಾರೆ ಎಂದು ದೃಢಪಡಿಸಿದ್ದಾರೆ. ಬೋಜ ಶೆಟ್ಟಿಯವರ ತಾಯಿ ವೆಂಕಮ್ಮ ಶೆಟ್ಟಿಯವರು ಪ್ರಸಿದ್ಧ ನಾಟಿ ವೈದ್ಯರಾಗಿದ್ದು ಗ್ರಾಮದಲ್ಲಿ ಹೆಸರುವಾಸಿಯಾಗಿದ್ದರು. ಹೆರಿಗೆ ಸೇರಿದಂತೆ ಹಲವಾರು ಕಾಯಿಲೆಗಳಿಗೆ ಹಳ್ಳಿ ಮದ್ದು ನೀಡುತಿದ್ದರು ಅದಲ್ಲದೇ ದನ ಕರು ಸೇರಿದಂತೆ ಸಾಕು ಪ್ರಾಣಿಗಳಿಗೂ ಮದ್ದು ನೀಡುತಿದ್ದರು. ಅವರ ಮರಣ ನಂತರ ಬೋಜ ಶೆಟ್ಟಿಯವರು ತಾಯಿಯ ವೃತ್ತಿಯನ್ನು ಮುಂದುವರಿಸಿದ್ದರು. ಸಾಧು ಸ್ವಬಾವದವರಾಗಿದ್ದ ಇವರು ಎಲ್ಲರಲ್ಲೂ ಆತ್ಮೀಯತೆಯಿಂದ ಇರುತಿದ್ದರು.

error: Content is protected !!