ಡಯಾಲಿಸಿಸ್ ರೋಗಿಗಳಿಗೆ ನರಕಯಾತನೆಯಿಂದ ಮುಕ್ತಿ: ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಹೊಸ ಡಯಾಲಿಸಿಸ್ ಯಂತ್ರ ಅಳವಡಿಕೆ: ಮಾಜಿ ಶಾಸಕ ಕೆ. ವಸಂತ ಬಂಗೇರರ ಸ್ಪಂದನೆ: ಅಭಿನಂದನೆ

ಬೆಳ್ತಂಗಡಿ: ಅನಾರೋಗ್ಯದಲ್ಲಿರುವ ಬಡವರಿಗೆ ಆರೋಗ್ಯ ಕರುಣಿಸಬೇಕಾಗಿದ್ದ ಬೆಳ್ತಂಗಡಿ ಸರಕಾರಿ ಆಸ್ಪತ್ರೆ ಡಯಾಲಿಸಿಸ್ ರೋಗಿಗಳ ಪಾಲಿಗಂತು ನರಕವನ್ನೇ ತೋರಿಸಿತ್ತು. ಡಯಾಲಿಸಿ ಯಂತ್ರ ಕೆಟ್ಟು ಹೋಗಿ ಡಯಾಲಿಸಿ ರೋಗಿಗಳಿಗೆ ಡಯಾಲಿಸಿಸ್ ಮಾಡಲಾಗದೇ, ಸರಿಯಾದ ಔಷಧಗಳಿಲ್ಲದೆ ಆಸ್ಪತ್ರೆಯ ಅವ್ಯವಸ್ಥೆಯಿಂದ ರೋಗಿಗಳು ಅಕ್ಷಶಃ ನರಕವನ್ನೇ ಅನಿಭವಿಸಿದ್ದರು. ಆದರೆ ಈಗ ಈ ಎಲ್ಲಾ ಸಂಕಷ್ಟಗಳಿಗೂ ಮುಕ್ತಿ ಸಿಕ್ಕಿದ್ದು ಆಸ್ಪತ್ರೆಗೆ ಹೊಸ ಡಯಾಲಿಸಿಸ್ ಯಂತ್ರ ಅಳವಡಿಕೆಯಾಗಿದೆ.

ಆಸ್ಪತ್ರೆಯಲ್ಲಿ ಡಯಾಲಿಸಿಸ್ ಯಂತ್ರ ಕೆಟ್ಟು ಹೋದ ಬಳಿಕ ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಲಾಗಿತ್ತಾದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಬಳಿಕ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಆಸ್ಪತ್ರೆಗೆ ಭೇಟಿ ನೀಡಿ, ಆಸ್ಪತ್ರೆಯ ಅಗತ್ಯತೆಗಳನ್ನು ತಿಳಿದು ಆಸ್ಪತ್ರೆಗೆ ಹೊಸ ಡಯಾಲಿಸಿ ಯಂತ್ರ ಅಳವಡಿಸುವ ಬಗ್ಗೆ ಭರವಸೆ ನೀಡಿದ್ದರು. ಈ ಮಧ್ಯ ಮಾಜಿ ಶಾಸಕ ಕೆ. ವಸಂತ ಬಂಗೇರ ಅವರು ಅನೇಕ ಬಾರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ಸಚಿವರಲ್ಲಿ ಮನವಿ ಮಾಡಿ ಜನರ ಕಷ್ಟಗಳಿಗೆ ಕಿವಿಯಾಗಿ ಆಸ್ಪತ್ರೆಗೆ ಹೊಸ ಡಯಾಲಿಸಿಸ್ ಯಂತ್ರ ಅಳವಡಿಸುವಲ್ಲಿ ಶತಪ್ರಯತ್ನ ಮಾಡಿದ್ದಾರೆ.


ಈ ಕುರಿತು ಬೆಳ್ತಂಗಡಿಯ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪುರಂದರ ದಾಸ್ ಪಿಲಿಚಂಡಿಕಲ್ಲು ಅವರು ಆಸ್ಪತ್ರೆಗೆ ಹೊಸ ಡಯಾಲಿಸಿಸ್ ಯಂತ್ರ ಅವಳವಿಡಿಸಲು ಸಹಕರಿಸಿದ ಆರೋಗ್ಯ ಸಚಿವ ದಿನೇಶ್ ಗುಂಡುರಾವ್, ಮಾಜಿ ಶಾಸಕ ಕೆ. ವಸಂತ ಬಂಗೇರ ಅವರಿಗೆ ಹಾಗೂ ದಾನಿಗಳಾದ ರೋಟರಿ ಕ್ಲಬ್ ನವರಿಗೆ ಹೃತ್ಪೂರ್ವಕ ಧನ್ಯವಾದಗಳು. ಹಲವಾರು ವರ್ಷಗಳಿಂದ ನಮ್ಮ ಕಷ್ಟಗಳನ್ನು ಸಂಬಂದಪಟ್ಟವರಲ್ಲಿ ಹೇಳಿಕೊಂಡರೂ ಪ್ರಯೋಜನವಾಗಲಿಲ್ಲ. ನಮ್ಮನ್ನು ಸಾವಿನ ದವಡೆಯಿಂದ ರಕ್ಷಿಸಿದ್ದೀರಿ. ಪ್ರಸ್ತುತ ನೆಫ್ರೋ ಕಂಪನಿಯು ಹೊಸ ಯಂತ್ರ ಅಳವಡಿಸಿದ್ದು, ಎಲ್ಲಾ ಚುಚ್ಚು ಮದ್ದು, ಮಾತ್ರೆಗಳೂ ಆರೋಗ್ಯ ಕೇಂದ್ರದಲ್ಲಿ ಲಭ್ಯವಿದೆ ಎಂದು ಸಂತಸವ್ಯಕ್ತಪಡಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಗಾಯತ್ರಿ ಪಿಲಿಚಂಡಿಕಲ್ಲು , ಪುಷ್ಪ ಮಾಯಿಲ ಗೌಡ ಕೌಕ್ರಡಿ, ಉಪಸ್ಥಿತರಿದ್ದರು.

error: Content is protected !!