ಜ.22 ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ: ‘ರಾಮಮಂದಿರ ಉದ್ಘಾಟನೆ ದಿನವೇ ನಮಗೆ ಹೆರಿಗೆಯಾಗಬೇಕು’: ವೈದ್ಯರ ಬಳಿ ಉತ್ತರ ಪ್ರದೇಶದ ಗರ್ಭಿಣಿ ತಾಯಂದಿರ ಮನವಿ

ಉತ್ತರ ಪ್ರದೇಶ: ಅಯೋಧ್ಯೆಯ ರಾಮಮಂದಿರದಲ್ಲಿ ನಡೆಯುವ ರಾಮಲಲ್ಲಾ ಮೂರ್ತಿ  ಪ್ರಾಣಪ್ರತಿಷ್ಠಾಪನಾ ದಿನವೇ ಹೆರಿಗೆ ಮಾಡುವಂತೆ ಉತ್ತರ ಪ್ರದೇಶದ ಅನೇಕ ತಾಯಂದಿರುವ ಮನವಿ ಮಾಡಿದ್ದಾರೆ.

ಜನವರಿ 22ರಂದು 51 ಇಂಚು ಎತ್ತರದ 5 ವರ್ಷದ ರಾಮಲಲ್ಲಾ ವಿಗ್ರಹವನ್ನು ಸ್ಥಾಪಿಸಲು ನಿರ್ಧರಿಸಲಾಗಿದ್ದು, ಈ ದಿನವೇ ಸಿಸೇರಿಯನ್ ಹೆರಿಗೆ ಮಾಡುವಂತೆ ಹಲವಾರು ಗರ್ಭಿಣಿಯರು ಕಾನ್ಪುರದ ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ಮನವಿ ನೀಡಿದ್ದಾರೆ. ಈ ಮನವಿ ಬಗ್ಗೆ ಮಾತನಾಡಿದ ಗಣೇಶ್ ಶಂಕರ್ ವಿದ್ಯಾರ್ಥಿ ಸ್ಮಾರಕ ವೈದ್ಯಕೀಯ ಕಾಲೇಜಿನ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಉಸ್ತುವಾರಿ ಸೀಮಾ ದ್ವಿವೇದಿ ಅವರು, ಜನವರಿ 22ರಂದು 35 ಸಿಸೇರಿಯನ್ ಆಪರೇಷನ್‍ಗಳಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಒಂದು ಲೇಬರ್ ರೂಮ್‍ನಲ್ಲಿ 12ರಿಂದ 14 ಸಿಸೇರಿಯನ್ ಹೆರಿಗೆಗೆ ಲಿಖಿತ ಮನವಿಗಳನ್ನು ಸ್ವೀಕರಿಸಲಾಗಿದೆ. ಜನವರಿ 22ರ ಮೊದಲು ಅಥವಾ ನಂತರ ಕೆಲವು ದಿನಗಳಾಗಿದ್ದರೂ ಸಹ ಅಂದು ಮಂಗಳಕರ ದಿನವೆಂದು ಪರಿಗಣನೆ ಮಾಡಿದ್ದಾರೆ. ರೋಗಿಗಳ ಆರೋಗ್ಯ ಸ್ಥಿತಿ ನೋಡಬೇಕು. ಈ ಹೆರಿಗೆಯ ಸಮಯದಲ್ಲಿ ಗರ್ಭಿಣಿಯರಿಗೆ ಯಾವುದೇ ತೊಂದರೆಯಾಗದಂತೆ ವಿಶೇಷ ಕಾಳಜಿ ವಹಿಸುವುದು ಮುಖ್ಯವಾಗಿದೆ ಎಂದಿದ್ದಾರೆ.

ಭಗವಾನ್ ರಾಮನು ವೀರತೆ, ಸಮಗ್ರತೆ ಮತ್ತು ವಿಧೇಯತೆಯ ಸಂಕೇತ ಎಂದು ತಾಯಂದಿರು ನಂಬಿದ್ದಾರೆ. ಹೀಗಾಗಿ ದೇವಾಲಯದಲ್ಲಿ ಪ್ರಾಣ ಪ್ರತಿμÉ್ಠಯ ದಿನದಂದು ಜನಿಸಿದ ಶಿಶುಗಳೂ ಸಹ ಅದೇ ಗುಣಗಳನ್ನು ಹೊಂದಿರುತ್ತಾರೆ ಎಂಬ ನಂಬಿಕೆಯಲ್ಲಿ ಗರ್ಭಿಣಿ ತಾಯಂದಿರು, ಕುಟುಂಬಸ್ಥರು ಬಾಲ ರಾಮನ ವಿಗ್ರಹದ ಪ್ರತಿμÁ್ಠಪನೆ ದಿನದಂದು ಮಗು ಜನಿಸಬೇಕೆಂಬ ಅಪೇಕ್ಷಿಸಿದ್ದಾರೆ.

error: Content is protected !!