ಶ್ರೀ ಲೋಕನಾಥೇಶ್ವರ ದೇವಸ್ಥಾನ ಬದ್ಯಾರ್, ಶಿರ್ಲಾಲು: ಕಲಾಮಂಟಪ ನಿರ್ಮಾಣಕ್ಕೆ ಶಿಲಾನ್ಯಾಸ

ಬೆಳ್ತಂಗಡಿ: ಶ್ರೀ ಲೋಕನಾಥೇಶ್ವರ ದೇವಸ್ಥಾನ ಬದ್ಯಾರ್ ಶಿರ್ಲಾಲು ಇಲ್ಲಿ ಕಲಾಮಂಟಪ ನಿರ್ಮಾಣಕ್ಕೆ ಡಿ.22ರಂದು ಶಿಲಾನ್ಯಾಸ ನೆರವೇರಿಸಲಾಯಿತು.

ಕ್ಷೇತ್ರದ ಪ್ರಧಾನ ಅರ್ಚಕರಾದ ಸೂರ್ಯನಾರಾಯಣರಾವ್ ಪೂಜೆಯ ವಿಧಿ ವಿಧಾನಗಳನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಆಡಳಿತ ಸಮಿತಿಯ ಸದಸ್ಯರಾದ ಪ್ರಭಾಕರ ಮುಡ್ಜ್ ಲ್, ಭಜನಾ ಮಂಡಳಿಯ ಅಧ್ಯಕ್ಷ,  ಜಗನ್ನಾಥ ಕುಲಾಲ್, ಕಾರ್ಯದರ್ಶಿ ಸದಾಶಿವ ಶಿವಗಿರಿ ಮತ್ತು ಮಂಡಳಿಯ ಮಾಜಿ ಅಧ್ಯಕ್ಷರಗಳಾದ ಸುರೇಶ್ ಕೋಚೊಟ್ಟು, ಅಶೋಕ್ ಕುಮಾರ್ ರಾಜೇಶ್ ಕುಲಾಲ್ ಬೈರೊಟ್ಟು ಪ್ರಭಾಕರ ನಾಯ್ಕ ಮತ್ತು ಪ್ರಕಾಶ್ ಕೂರ್ದೊಟ್ಟು ಮಂಡಳಿಯ ಎಲ್ಲಾ ಸರ್ವ ಸದಸ್ಯರು ಉಪಸ್ಥಿತರಿದ್ದರು.

error: Content is protected !!