ಗ್ಯಾಸ್ ಸಿಲಿಂಡರ್ ಸ್ಫೋಟ: 15 ಗುಡಿಸಲುಗಳು ಭಸ್ಮ..!

ಆಂಧ್ರಪ್ರದೇಶ: ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು 15 ಗುಡಿಸಲುಗಳು ಸುಟ್ಟು ಕರಕಲಾದ ಘಟನೆ ಆಂಧ್ರಪ್ರದೇಶದ ಪೂರ್ವ ಗೋದಾವರಿಯ ನಲ್ಲಜೆರ್ಲ ಎಂಬಲ್ಲಿ ಡಿ.21ರಂದು ರಾತ್ರಿ ಸಂಭವಿಸಿದೆ.

ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದ್ದು ಬೆಂಕಿಯ ಜ್ವಾಲೆ ಸುತ್ತ ಆವರಿಸಿದ ಪರಿಣಾಮ ಮತ್ತೆ 3 ಗ್ಯಾಸ್ ಸಿಲಿಂಡರ್‌ಗಳು ಸ್ಫೋಟಗೊಂಡಿವೆ. ಹೀಗಾಗಿ 15 ಗುಡಿಸಲುಗಳು ಸುಟ್ಟು ಕರಕಲಾಗಿವೆ.

ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಲು ಶತಪ್ರಯತ್ನ ಮಾಡಿದ್ದಾರೆ.

error: Content is protected !!